ಮೊಬೈಲ್ ಸೇವೆ ಬಳಿಕ ಇದೀಗ ಬಿಸ್ಕೆಟ್ ಸರದಿ: ಜನಪ್ರಿಯ ಪಾರ್ಲೆಜಿ ಇನ್ನು ದುಬಾರಿ

Prasthutha|

ನವದೆಹಲಿ: ಮೊಬೈಲ್ ಸೇವಾ ಕಂಪನಿಗಳು ದರ ಏರಿಸಿ ಗ್ರಾಹಕರಿಗೆ ಶಾಕ್ ಕೊಟ್ಟ ಬೆನ್ನಲೇ ಭಾರತದ ಜನಪ್ರಿಯ ಬಿಸ್ಕೆಟ್ ಕಂಪನಿ ‘ಪಾರ್ಲೆಜಿ’ ಬೆಲೆಯೂ ಏರಿಕೆಯಾಗಿದೆ. ಪಾರ್ಲೆ ಕಂಪನಿಯ 20 ರುಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಎಲ್ಲಾ ಉತ್ಪನ್ನಗಳ ಬೆಲೆಯನ್ನು ಶೇಕಡಾ 10ರಷ್ಟು ಹೆಚ್ಚಿಸಲಾಗಿದೆ. 20 ರುಪಾಯಿಗಿಂತಲೂ ಕಡಿಮೆ ಬೆಲೆಯ ಪ್ಯಾಕೆಟ್‌ನ ತೂಕದಲ್ಲಿ ಇಳಿಕೆ ಮಾಡಲಾಗಿದೆ.

- Advertisement -

ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಜನಪ್ರಿಯ ಪಾರ್ಲೆ ಜಿ ಗ್ಲೂಕೋಸ್ ಬಿಸ್ಕೆಟ್‌ಗಳ ಬೆಲೆಯನ್ನು ಶೇ 6-7ರಷ್ಟು ಹೆಚ್ಚಿಸಲಾಗಿದೆ. ಕಂಪನಿಯು ಇತರ ಉತ್ಪನ್ನಗಳಾದ ಹೈಡ್&ಸೀಕ್ ಮತ್ತು ಕ್ರ್ಯಾಕ್‌’ಜಾಕ್, ರಸ್ಕ್‌ ಮತ್ತು ಕೇಕ್ ಮೇಲಿನ ಬೆಲೆಗಳಲ್ಲೂ ಶೇ.5 ರಿಂದ 10ರಷ್ಟು ಹೆಚ್ಚಳವಾಗಿದೆ.

ಸಕ್ಕರೆ, ಗೋಧಿ ಸೇರಿದಂತೆ ಖಾದ್ಯ ತೈಲದಂತಹ ಕಚ್ಚಾ ವಸ್ತುಗಳ ಬೆಲೆಯಲ್ಲಿ ಶೇಕಡಾ 50-60 ರಷ್ಟು ಹೆಚ್ಚಳವಾಗಿದೆ. ಹೆಚ್ಚಿನ ಕಂಪನಿಗಳು ಉತ್ಪಾದನಾ ವೆಚ್ಚದ ಮೇಲೆ ಹಣದುಬ್ಬರದ ಒತ್ತಡವನ್ನು ಎದುರಿಸುತ್ತಿವೆ. ಇವೆಲ್ಲವನ್ನೂ ಪರಿಗಣಿಸಿ ಕಂಪನಿಯು ಬೆಲೆ ಹೆಚ್ಚಳದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಪಾರ್ಲೆ ಉತ್ಪನ್ನಗಳ ಉನ್ನತ ವಿಭಾಗದ ಮುಖ್ಯಸ್ಥ ಮಯಾಂಕ್ ಶಾ ಹೇಳಿದ್ದಾರೆ.

- Advertisement -

ಕಳೆದ 82 ವರ್ಷಗಳಿಂದ ದೇಶದ ಸಾಮಾನ್ಯ ಜನರ ನೆಚ್ಚಿನ ಬಿಸ್ಕೆಟ್ ಪಾರ್ಲೆ-ಜಿ, ಲಾಕ್‌ಡೌನ್ ಅವಧಿಯಲ್ಲಿ ತನ್ನ ಎಲ್ಲಾ ಮಾರಾಟ ದಾಖಲೆಗಳನ್ನು ಮುರಿದಿತ್ತು. ಈ ಸಮಯದಲ್ಲಿ ಪಾರ್ಲೆ-ಜಿ ಬ್ರಾಂಡ್ ಬಿಸ್ಕೆಟ್‌ಗಳು ಅತಿ ಹೆಚ್ಚು ಮಾರಾಟವಾಗಿತ್ತು.



Join Whatsapp