ಮಾಲೆಗಾಂವ್ ಸ್ಫೋಟ ಪ್ರಕರಣ: ಮುಂಬೈ ನ್ಯಾಯಾಲಯದಲ್ಲಿ ಪ್ರಜ್ಞಾ ಠಾಕೂರ್ ದಿಢೀರ್ ಹಾಜರ್!

Prasthutha|

ಮುಂಬೈ: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ, ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಬುಧವಾರ ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ದಿಢೀರ್ ಹಾಜರಾಗಿದ್ದಾರೆ.

- Advertisement -

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ) ಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ವಿಚಾರಣೆ ಎದುರಿಸಲು ನ್ಯಾಯಮೂರ್ತಿ ಪಿ.ಆರ್. ಸಿತ್ರೆ ಅವರ ಮುಂದೆ ಹಾಜರಾದರು.

ಈ ಕುರಿತು ವಾದ ಮಂಡಿಸಿದ ಠಾಕೂರು ಪರ ವಕೀಲರು, ವೈದ್ಯಕೀಯ ಚಿಕೆತ್ಸೆಗಾಗಿ ಮುಂಬೈಗಾಗಿ ಆಗಮಿಸಿದ ಕಾರಣ ಸಮನ್ಸ್ ದೊರೆಯದ ಹೊರತಾಗಿಯೂ ವಿಚಾರಣೆಗೆ ಬಂದಿರುವುದಾಗಿ ತಿಳಿಸಿದರು.

- Advertisement -

ಸದ್ಯ ಸಂಸದೆ, ಬಿಜೆಪಿ ನಾಯಕಿ ಜನವರಿಯಲ್ಲಿ ಕೊನೆಯದಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಈ ಪ್ರಕರಣದಲ್ಲಿ ಠಾಕೂರು ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಏಳು ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ.

ಮೋಟಾರ್ ಬೈಕನ್ನು ಠಾಕೂರ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಮತ್ತು 2008 ರಲ್ಲಿ ಈ ಪ್ರಕರಣದಲ್ಲಿ ಯುಎಪಿಎಯಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2017 ರಲ್ಲಿ ಬಾಂಬೆ ಹೈಕೋರ್ಟ್ ಆಕೆಗೆ ಜಾಮೀನು ನೀಡಿತ್ತು.



Join Whatsapp