ಉಪಚುನಾವಣೆಯ ಸೋಲು ಸಕಾಲಿಕ ಎಚ್ಚರಿಕೆ, ಅಂತಿಮ ತೀರ್ಪು ಅಲ್ಲ: ನಿರಾಸೆಯೊಂದಿಗೆ ಪ್ರತಿಕ್ರಿಯಿಸಿದ ಹಿಮಾಚಲ ಮುಖ್ಯಮಂತ್ರಿ

Prasthutha|

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಸೋಲನ್ನು ಬಿಜೆಪಿಗೆ ಸಮಯೋಚಿತ ಎಚ್ಚರಿಕೆ ಹೊರತು ಅಂತಿಮ ತೀರ್ಪಲ್ಲ ಎಂದು ತಿಳಿಸಿರುವ ಮುಖ್ಯಮಂತ್ರಿ ಜೈರಾಮ್ ಠಾಕೂಕ್, ತನ್ನ ನಿರಾಸೆಯನ್ನು ಹೊರ ಹಾಕಿದ್ದಾರೆ. ಮಾತ್ರವಲ್ಲ ಈ ಸೋಲಿನ ಬಗ್ಗೆ ಬಿಜೆಪಿ ಅವಲೋಕಿಸಿದ್ದು, ಅತಿಯಾದ ಆತ್ಮವಿಶ್ವಾಸದಿಂದ ಪಕ್ಷಕ್ಕೆ ಸೋಲಾಗಿದೆ ಎಂದು ತಿಳಿಸಿದ್ದಾರೆ.

- Advertisement -

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅರ್ಕಿ, ಫತೇಪುರ್ ಮತ್ತು ಜುಬ್ಬಲ್ – ಕೋಟ್ ಖೈ ಅಸೆಂಬ್ಲಿ ಕ್ಷೇತ್ರ ಮತ್ತು ಮಂಡಿ ಲೋಕಸಭ ಕ್ಷೇತ್ರಗಳಲ್ಲಿ ಸೋತಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮಂಡಿಯನ್ನು ಭರ್ಜರಿಯಾಗಿ ಗೆದ್ದಿತ್ತು ಎಂದು ಹೇಳಿದರು.

ಈ ಉಪಚುನಾವಣೆಗಳಲ್ಲಿ ಬಿಜೆಪಿಯ ಸೋಲಿಗೆ ಹಲವಾರು ಕಾರಣಗಳಿದ್ದು, ಅದಕ್ಕಾಗಿ ಆಳವಾದ ಅವಲೋಕನದ ಅಗತ್ಯವಿದೆ ಎಂದು ಠಾಕೂರ್ ತಿಳಿಸಿದರು.



Join Whatsapp