ವಿದ್ಯಾರ್ಥಿ ಪಾರ್ಲಿಮೆಂಟ್ ನಲ್ಲಿ NEP ತಿರಸ್ಕರಿಸಿ ನಿರ್ಣಯ ಅಂಗೀಕಾರ

Prasthutha|

ಮಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು, ಲೋಕ ಸಭೆಯಲ್ಲಾಗಲಿ ವಿಧಾನಸಭೆಯಲ್ಲಾಗಲಿ ಚರ್ಚೆಗಳು ನಡೆಯದ ಕಾರಣ ವಿದ್ಯಾರ್ಥಿಗಳು ಸೇರಿಕೊಂಡು ಮಂಗಳೂರಿನ ಜಮ್ಯಿಯತುಲ್ ಫಲಾಹ್ ಸಭಾಂಗಣದಲ್ಲಿ ವಿದ್ಯಾರ್ಥಿ ಪಾರ್ಲಿಮೆಂಟ್ ನಡೆಸಿ ಎನ್.ಇ.ಪಿಯ ಬಗ್ಗೆ ಪರ ವಿರೋಧ ಚರ್ಚೆ ನಡೆಸಿ ತಿರಸ್ಕರಿಸಿ ನಿರ್ಣಯ ಮಂಡಿಸಲಾಯಿತು.

- Advertisement -

ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳ ನಾಯಕರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಾಗಿರುವ ಲೋಪದೋಷಗಳನ್ನು ಮಂಡಿಸಿ, ಪರ ವಿರೋಧ ಚರ್ಚೆಗಳು ನಡೆಯಿತು. ಹೈಕೋರ್ಟ್ ವಕೀಲರಾದ ಅಶ್ರಫ್ ಅಗ್ನಾಡಿ ಸಭಾಪತಿಗಳಾಗಿ ಅಂತಿಮ ನಿರ್ಣಯವನ್ನು ಅಂಗೀಕರಿಸಿದರು.

ನಿರ್ಣಯ: ಹಲವಾರು ರೀತಿಯ ಗೊಂದಲಗಳಿಂದ ಕೂಡಿದ, ವಿದ್ಯಾರ್ಥಿ ವಿರೋಧಿಯಾಗಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಲು ನಿರ್ಣಯ ಮಂಡನೆ.

- Advertisement -

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಅಧಿಕಾರದಲ್ಲಿರುವ ಸರಕಾರದ ಪ್ರತಿನಿಧಿಗಳ ಹಿನ್ನೆಲೆಯುಳ್ಳ ಸಿದ್ಧಾಂತವನ್ನು ಶಿಕ್ಷಣದಲ್ಲಿ ಹೇರಿಸುವ ಸ್ವಜನಪಕ್ಷಪಾತದ ಧೋರಣೆ ಹೊಂದಿರುವ ಮತ್ತು ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಸಂವಿಧಾನದ ಆಶಯಗಳನ್ನು ಅಳವಡಿಸಿಕೊಳ್ಳದೆ ಸಂವಿಧಾನಾತ್ಮಕವಾಗಿ ಸಮವರ್ತಿ ಪಟ್ಟಿಗೆ ಸೇರುವ ಶಿಕ್ಷಣವನ್ನು ನೇರವಾಗಿ ಒಕ್ಕೂಟ ಸರಕಾರದ ಮಂತ್ರಿ ಮಂಡಲದಲ್ಲಿ ಅನುಮೋದನೆ ಪಡೆದು ಜಾರಿಗೊಳಿಸುವ ರೀತಿಯಲ್ಲೇ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡು, ಶಿಕ್ಷಣವನ್ನು ಕೇಂದ್ರೀಕರಣಗೊಳಿಸುವ ಹುನ್ನಾರದೊಂದಿಗೆ, ಇತಿಹಾಸವನ್ನು ತಿರುಚಿ ಪ್ರಾಚೀನ ಇತಿಹಾಸದಲ್ಲಿ ಬದಲಾವಣೆಗಳನ್ನು ತರುವ ಧ್ಯೇಯವನ್ನಿಟ್ಟುಕೊಂಡು ಭಾರತದ ಮೂಲನಿವಾಸಿಗಳಾದ ದ್ರಾವಿಡರ ಇತಿಹಾಸವನ್ನು ಮರೆಮಾಚುವ ಮೂಲ ಉದ್ದೇಶದೊಂದಿಗೆ ಮನುವಾದಕ್ಕೆ ಒತ್ತು ಕೊಡುವ ದುರಾಲೋಚನೆ ಹೊಂದಿದೆ ಮತ್ತು ಈ ಶಿಕ್ಷಣ ನೀತಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತವಾದ ಸ್ವಾತಂತ್ರ್ಯ ನೀಡಿ ವಿಶೇಷವಾದ ಅಧಿಕಾರ ನೀಡುವ ಮೂಲಕ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ತಂತ್ರ ಹೊಂದಿದೆ ಹಾಗೂ ವಿದೇಶಿ ಶಿಕ್ಷಣ ಸಂಸ್ಥೆಗಳಿಗೆ ಹೂಡಿಕೆ ಮಾಡಲು ಅವಕಾಶ ಮಾಡಿಕೊಡುವ ನೂತನ ಶಿಕ್ಷಣ ನೀತಿಯು ಶಿಕ್ಷಣದ ವ್ಯಾಪಾರ ನಡೆಸಿ ಶಿಕ್ಷಣವನ್ನು ವಾಣಿಜ್ಯಕರಣ ಮಾಡಿ ಸಾಮಾಜಿಕವಾಗಿ ಹಿಂದುಳಿದ, ಶೋಷಿತ, ದಮನಿತ, ಮಧ್ಯಮ ಮತ್ತು ಬಡ ವರ್ಗದ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತಗೊಳಿಸುವ ದೊಡ್ಡ
ಯೋಜನೆಯಾಗಿದೆ ಎಂಬುದು ಈ ವಿದ್ಯಾರ್ಥಿಗಳ ಸಂಸತ್ತಿನಲ್ಲಿ ಪ್ರಮುಖವಾಗಿ ಕಂಡು ಬಂದಿರುವ ಅಂಶಗಳಾಗಿವೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕುತಂತ್ರವನ್ನು ವಿದ್ಯಾರ್ಥಿಗಳ ಸಂಸತ್ತಿನಲ್ಲಿ ಬಯಲಾಗಿವೆ ಆದುದ್ದರಿಂದ ವಿದ್ಯಾರ್ಥಿ ವಿರೋಧಿಯಾಗಿರುವ NEP-2020 ಯನ್ನು ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳ ನಾಯಕರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ಸಮಕ್ಷಮತೆಯಲ್ಲಿ, ಸಭಾಪತಿಗಳ ನೇತೃತ್ವದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ, NEP-2020 ಯನ್ನು ಈ ಸಂಸತ್ತಿನಲ್ಲಿ ತಿರಸ್ಕರಿಸಿ ನಿರ್ಣಯವನ್ನು ಮಂಡಿಸಿ ಅಂಗೀಕರಿಸಲಾಯಿತು.



Join Whatsapp