ಮಡಿಕೇರಿ: ದೇಶದ ಉತ್ತಮ ಗಾಳಿಯ ಗುಣಮಟ್ಟ ಸೂಚ್ಯಂಕದ ಪ್ರಮುಖ ನಗರದಲ್ಲಿ ಪೈಕಿ ರಾಜ್ಯದ ಮಡಿಕೇರಿ ಆಗ್ರ ಸ್ಥಾನ ಪಡೆದುಕೊಂಡಿದೆ. ಕೇಂದ್ರ ಮಾಲಿನ್ಯ ನಿಯಂತ್ರ ಮಂಡಳಿಯ ಎಕ್ಯು ಐ ದೈನಂದಿನ ಬುಲೆಟಿನ್ ಪ್ರಕಾರ ಮಡಿಕೇರಿ 24 ಮೌಲ್ಯವನ್ನು ಪಡೆಕೊಂಡಿದ್ದು, ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ದೇಶದಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ.
ಮಂಗಳವಬಾರ ಮಡಿಕೇರಿಯ ಎಕ್ಯುಐ ಸೂಚ್ಯಂಕವು 19 ಪಡೆದುಕೊಂಡಿದ್ದ, ಉಳಿದಂತೆ ಶಿಲೋಂಗ್ 12, ಮಿಜೋರಾಮ್ 17 ತಮಿಳುನಾಡಿನ ಕೂಡುಂಗೈಯೂರ್ 19, ಪೆರುಂಗುಡಿ 21, ಆರುಂಬಾಕಮ್ 22 ಮೌಲ್ಯವನ್ನು ಪಡೆದುಕೊಂಡು ಆಗ್ರ ಸ್ಥಾನದಲ್ಲಿದೆ.
ಇನ್ನೂ ರಾಜ್ಯದ ಹಾಸನ 25, ದಾವಣಗೆರೆ 27, ಚಿಕ್ಕಬಳ್ಳಾಪುರ ಚಿಕ್ಕಮಗಳೂರು 28, ರಾಮನಗರ 32 ಹುಬ್ಬಳ್ಳಿ 35 ಅಂಕ ಪಡೆದುಕೊಂಡಿದೆ.
ಮಡಿಕೇರಿಯ ಮಯೂರ ವ್ಯಾಲಿ ಪ್ಯೂವ್ ನಲ್ಲಿ ಗಾಳಿ ಗುಣಮಟ್ಟ ತಪಾಸಣಾ ಕೇಂದದಲ್ಲಿ ಪ್ರತಿ ನಿತ್ಯ ಗಾಳಿಯ ಗುಣಮಟ್ಟ ದಾಖಲಾಗುತ್ತದೆ. ಮಡಿಕೇರಿಯ ಚಲನೆ, ವಾಹನಗಳ ಸಂಚಾರದ ಆಧಾರದ ಮೇಲೆ ಗಾಳಿಯ ಗುಣಮಟ್ಟ ದಾಖಲಾಗುತ್ತದೆ. ಕೊಡಗು ಹಿಂದಿನಿಂದಲೂ 50ರ ಸೂಚ್ಯಂಕ ದಾಖಲಾಗುತ್ತಿರುವುದು ಕಂಡುಬಂದಿವೆ.