ಬೆಂಗಳೂರು: ಚಕ್ರಾ, ಸಾವೇಹಕ್ಲು ಹಾಗೂ ಮಾಣೆ ಯೋಜನೆಗಳ ಸಂಬಂಧ, ರಾಜ್ಯ ಅರಣ್ಯ ಇಲಾಖೆ, ಅನಧಿಕೃತವಾಗಿ, ನೋಟಿಫಿಕೇಶನ್ ಮಾಡಿಕೊಂಡಿರುವ ಭೂ ಪ್ರದೇಶವನ್ನು, ಕಂದಾಯ ಇಲಾಖೆಗೆ ವಾಪಸು ಹಸ್ತಾಂತರ ಮಾಡಿ ಕೊಡುವ, ವಿಷಯವಾಗಿ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರು, ಇಂದು ಅರಣ್ಯ ಸಚಿವ ಶ್ರೀ ಉಮೇಶ್ ಕತ್ತಿ ಹಾಗೂ ಹಿರಿಯ ಅರಣ್ಯಾಧಿಕಾರಿ ಗಳೊಂದಿಗೆ, ವಿಸ್ತೃತವಾಗಿ ಚರ್ಚಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ, ಪ್ರಸ್ತಾಪ ಮಾಡಿದ ಸಚಿವರು, ಕಳೆದ ಮೂರು ದಶಕಗಳಿಗೂ ಹೆಚ್ಚಿನ ಸಮಯದಿಂದ ನೆನೆಗುದಿಗೆ ಬಿದ್ದಿರುವ ಜ್ವಲಂತ ಸಮಸ್ಯೆಗೆ ಪರಿಹಾರ ದೊರಕಿಸುವಂತೆ, ಸಚಿವರು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ಅರಣ್ಯಇಲಾಖೆಯ ವಶದಲ್ಲಿ ಅನಧಿಕೃತವಾಗಿ ಇರುವ ಭೂಮಿಯಲ್ಲಿ, ಈಗಾಗಲೇ, ಜನವಸತಿಯ ಪ್ರದೇಶವಾಗಿದ್ದು, ಶಾಲೆ, ಆಸ್ಪತ್ರೆ ಹಾಗೂ ಇನ್ನಿತರ ಸರಕಾರಿ ಸಾರ್ವಜನಿಕ ಸೇವೆಗಳನ್ನು ನೀಡಲಾಗುತ್ತಿದೆ.
ಹತ್ತು ಹಲವು ವರ್ಷಗಳಿಂದ, ಕಷ್ಟ ಕಾರ್ಪಣ್ಯ ಗಳನ್ನು ಸಹಿಸಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಸಾವಿರಾರು ಜನರ ಅನಿಶ್ಚತೆಗೆ ಕೊನೆ ಹೇಳ ಬೇಕೆಂದು, ಸಚಿವರು, ತಿಳಿಸಿದರು.
ಧೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿರುವ ಸಮಸ್ಯೆಗೆ, ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ, ನಿರ್ದೇಶಿಸಿದ ಅರಣ್ಯ ಸಚಿವ ಶ್ರೀ ಉಮೇಶ್ ಕತ್ತಿ ರವರು, “ಈ ಸಂಬಂಧ, ಅಗತ್ಯ ಬಿದ್ದರೆ, ಸಂಪುಟ ಸಭಯಲ್ಲಿಯೂ ಪ್ರಸ್ತಾಪ ಮಾಡಲಾಗುವುದು” ಎಂದು ತಿಳಿಸಿದರು.
ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ಶ್ರೀ ಜಾವೆದ್ ಅಖ್ತರ್, ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳದ ಶ್ರೀ ಸಂಜಯ್ ಬಿಜ್ಜೂರ್, ಸಂಜಯ್ ಮೋಹನ್, ಅವರೂ ಸಭೆಯಲ್ಲಿ ಉಪಸ್ಥಿತ ರಿದ್ದರು.
ಸಂತ್ರಸ್ತರ ನಿಯೋಗದ ಹಿರಿಯರಾದ ಶ್ರೀ ಶ್ರೀಕರ ಅವರು, ಈ ಸಂಬಂಧವಾಗಿ ಇರುವ ಸಮಸ್ಯೆಯನ್ನು ವಿವರವಾಗಿ ಸಭೆಯ ಗಮನಕ್ಕೆ ತಂದರಲ್ಲದೆ, ಸಮಸ್ಯೆಯ
ನಿವಾರೋಣಪಯವನ್ನೂ
ಸೂಚಿಸಿದರು.