ಶಿವಕಾಶಿಯಲ್ಲಿ ಮತ್ತೊಂದು ಪಟಾಕಿ ಅವಘಡ: ಸ್ಫೋಟದ ತೀವ್ರತೆಗೆ ಧರಾಶಾಹಿಯಾದ ಕಟ್ಟಡ

Prasthutha|

ಶಿವಕಾಶಿ: ಪಟಾಕಿ ತಯಾರಿಸಲು ಬಳಸುವ ಕೆಮಿಕಲ್ ಸ್ಫೋಟದಿಂದಾಗಿ ಎರಡು ಅಂತಸ್ತಿನ ಕಟ್ಟಡವೇ ಧರಾಶಾಹಿಯಾದ ಘಟನೆ ತಮಿಳುನಾಡಿನ ‘ಪಟಾಕಿ ಪಟ್ಟಣ’ ಶಿವಕಾಶಿಯಲ್ಲಿ ನಡೆದಿದೆ.
ಶಿವಕಾಶಿಯ ಶ್ರೀವಿಳ್ಳಿಪುತ್ತೂರ್’ನ ನೆಹುರೂಜಿ ನಗರ್’ ನಲ್ಲಿ ಎರಡು ಅಂತಸ್ತಿನ ಕಟ್ಟಡದಲ್ಲಿ ಪಟಾಕಿ ತಯಾರಿಸಲು ಬಳಸುವ ಕೆಮಿಕಲ್’ ಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಲಾಗಿತ್ತು. ಸ್ಫೋಟದ ವೇಳೆ ಕಟ್ಟದಲ್ಲಿದ್ದ ಐವರು ಕಾರ್ಮಿಕರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು. ವೇಲ್’ ಮುರುಗನ್ ಹಾಗೂ ಮನೋಜ್ ಕುಮಾರ್ ಎಂಬವರನ್ನು ಸುಟ್ಟ ಗಾಯಗಳೊಂದಿಗೆ ಹೊರತೆಗೆಯಲಾಗಿದ್ದು, ಶಿವಕಾಶಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -


ಉಳಿದ ಮೂವರು ಮಹಿಳೆಯರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಘಟನೆ ನಡೆದ ಸ್ಥಳದಲ್ಲಿ ಮತ್ತಷ್ಟು ಕೆಮಿಕಲ್ ಇರುವ ಸಾಧ್ಯತೆ ಇರುವುದದರಿಂದ ರಕ್ಷಣಾ ಕಾರ್ಯವನ್ನು ಎಚ್ಚರಿಕೆಯಿಂದ ನಡೆಸಲಾಗುತ್ತಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.


ರಾಮನಾಥನ್ ಎಂಬ ವ್ಯಕ್ತಿಗ ಸೇರಿದ್ದ ಕಟ್ಟಡ ಇದಾಗಿದ್ದು, ಪೇಪರ್ ಟ್ಯೂಬ್ ತಯಾರಿಸುವ ಹೆಸರಲ್ಲಿ ಕೆಮಿಕಲ್’ಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ವಿಷಯ ತಿಳಿಯುತ್ತಲೇ ರಾಮನಾಥನ್ ನಾಪತ್ತೆಯಾಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಪೊಲೀಸರ ಜೊತೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.



Join Whatsapp