ಮುಂಬೈ: ಎನ್.ಸಿ.ಬಿ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಎಫ್.ಟಿ.ವಿ ಮುಖ್ಯಸ್ಥ ಕಾಶಿಫ್ ಖಾನ್ ಎಂಬವರು ಗೋವಾದಲ್ಲಿ ಕಾರ್ಯಾಚರಿಸುವ ರಷ್ಯಾದ ಡ್ರಗ್ಸ್ ಮಾಫಿಯಾದೊಂದಿಗೆ ನಂಟು ಹೊಂದಿದ್ದಾರೆ ಎಂದು ಸಚಿವ ನವಾಬ್ ಮಲಿಕ್ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಮಲಿಕ್, ಗೋವಾ ರಾಜ್ಯವು ಪ್ರಸಕ್ತ ಡ್ರಗ್ಸ್ ಕೇಂದ್ರವಾಗಿ ಪರಿವರ್ತನೆಯಾಗಿದ್ದು, ಎನ್.ಸಿ.ಬಿ ಮುಂಬೈ ಪರಿಮಿತಿಗೆ ಒಳಪಡುತ್ತದೆ ಎಂದು ತಿಳಿಸಿದರು. ಆದರೆ ಈ ಬಗ್ಗೆ ಯಾವುದೇ ರೀತಿಯಲ್ಲಿ ಕ್ರಮ ಜರುಗಿಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
ರಷ್ಯಾದ ಡ್ರಗ್ಸ್ ಮಾಫಿಯಾ ಗೋವಾದಲ್ಲಿ ಮಾದಕ ದ್ರವ್ಯಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಕಾಶಿಫ್ ಖಾನ್ ಈ ತಂಡವನ್ನು ನಿಯಂತ್ರಿಸುತ್ತಿದ್ದಾರೆ. ಆದರೆ ಸಮೀರ್ ವಾಂಖೆಡೆ ಖಾಸಗಿ ತಂಡದ ಮೂಲಕ ಡ್ರಗ್ಸ್ ಮಾಫಿಯಾಕ್ಕೆ ಬೆಂಗಾವಲಾಗಿದ್ದಾರೆ ಎಂದು ಮಲಿಕ್ ದೂರಿದ್ದಾರೆ.
ಈ ಮಧ್ಯೆ ಗೋವಾದಲ್ಲಿದ್ದುಕೊಂಡು ಹಲವು ಪ್ರಕರಣ ಭಾಗಿಯಾದ ಕಾಶಿಫ್ ಖಾನ್ ನನ್ನು ವಾಂಖೆಡೆ ಯಾಕೆ ವಿಚಾರಣೆಗೊಳಪಡಿಸಿಲ್ಲ ಮತ್ತು ಆತನ ಕರೆಗಳ ವಿವರಗಳನ್ನು ಎನ್.ಸಿ.ಬಿ ಪರಿಶೀಲನೆ ನಡೆಸಬೇಕೆಂದು ಮಲಿಕ್ ಒತ್ತಾಯಿಸಿದ್ದಾರೆ.