ಹೊಸದಿಲ್ಲಿ: IREO ಗ್ರೂಪ್ ನ ಉಪಾಧ್ಯಕ್ಷ ಮತ್ತು ಎಂಡಿ ಲಲಿತ್ ಗೋಯೆಲ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿದೆ.
ನಾಲ್ಕು ದಿನಗಳ ವಿಚಾರಣೆಯ ನಂತರ ಜಾರಿ ನಿರ್ದೇಶನಾಲಯವು ಗೋಯೆಲ್ ಅವರನ್ನು ಬಂಧಿಸಿದೆ. ಕಂಪನಿಯು 2010 ರಿಂದ ಫೋರಿನ್ ಎಕ್ಸ್’ಚೇಂಜ್ ಆಕ್ಟ್ (ಫೆಮಾ) ಉಲ್ಲಂಘನೆಗಾಗಿ ಈಡಿ ತನಿಖೆಯಲ್ಲಿದ್ದರೂ, ಚಂಡೀಗಢದ ಈಡಿ ಶಾಖೆ ದಾಖಲಿಸಿದ ಪ್ರಕರಣದಲ್ಲಿ ವಿಚಾರಣೆ ನಡೆದಿದೆ. ದೇಶ ತೊರೆಯಲು ಯತ್ನಿಸಿದ ಗೋಯೆಲ್ ಅವರನ್ನು ಕಳೆದ ಗುರುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರಿಗಳು ತಡೆದು ನಿಲ್ಲಿಸಿದ್ದರು.
ಗೋಯಲ್ ಅಂದಿನಿಂದ ಪ್ರತಿದಿನ ವಿಚಾರಣೆಗೆ ಹಾಜರಾಗುತ್ತಿದ್ದರೂ ನಂತರ ವಿಚಾರಣೆಯ ಹಾದಿ ತಪ್ಪಿಸಲು ಪ್ರಯತ್ನಿಸಿದ್ದರಿಂದ ಅವರನ್ನು ಬಂಧಿಸಬೇಕಾಯಿತು ಎಂದು ಈಡಿ ಮೂಲಗಳು ತಿಳಿಸಿವೆ.