ಹೊಸದಿಲ್ಲಿ: ರಾತ್ರಿ ವೇಳೆಯೂ ಶವ ಪರೀಕ್ಷೆಗೆ ಅವಕಾಶ ನೀಡಲಾಗಿದ್ದು, ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ಹತ್ಯೆ, ಆತ್ಮಹತ್ಯೆ, ಅತ್ಯಾಚಾರ, ಸಂಶಯಾಸ್ಪದ ಸಾವು, ಕೊಳೆತ ಶವಗಳು ಪತ್ತೆಯಾದ ಪ್ರಕರಣಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ.
ಸಾಮಾನ್ಯ ಸಾವಿನ ಪ್ರಕರಣಗಳಲ್ಲಿ ಸೂರ್ಯಾಸ್ತದ ಬಳಿಕವೂ ಪೋಸ್ಟ್ ಮಾರ್ಟಂಗೆ ಅವಕಾಶ ನೀಡಿದರೆ ಅಂಗಾಂಗ ದಾನಗಳಿಗೆ ಸಹಾಯ ವಾಗಲಿದೆ. ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ ಬ್ರಿಟಿಷರು ಜಾರಿ ಗೊಳಿಸಿದ್ದ ಪದ್ಧತಿಗೆ ಮುಕ್ತಾಯ ಹಾಡಲು ತೀರ್ಮಾನಿಸಲಾಗಿದೆ ಎಂದು ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.