104ನೇ‌ ವಯಸ್ಸಿನಲ್ಲಿ 89 ಅಂಕಗಳಿಸಿ ಪರೀಕ್ಷೆಯಲ್ಲಿ PASS ಆದ ಕುಟ್ಟಿಯಮ್ಮ !

Prasthutha|

ಕೊಟ್ಟಾಯಂ; “AGE IS JUST A NUMBER-  ವಯಸ್ಸು ಕೇವಲ ಒಂದು‌ ಸಂಖ್ಯೆ ಮಾತ್ರ” ಈ ಮಾತು ಎಲ್ಲಾ ಕ್ಷೇತ್ರಗಳಲ್ಲೂ ಪದೇ ಪದೇ ನಿರೂಪಿತವಾಗುತ್ತಲೇ ಇದೆ.  ಇದೀಗ ಕೇರಳದ 104 ವರ್ಷ ಪ್ರಾಯದ ಅಜ್ಜಿಯೊಬ್ಬರು ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪರೀಕ್ಷೆಯಲ್ಲಿ 100ರಲ್ಲಿ 89 ಅಂಕವನ್ನು ಪಡೆಯುವ ಮೂಲಕ ಅಸಾಧ್ಯವೆಂಬುದು ಯಾವುದೂ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

- Advertisement -

ತನ್ನ 104ನೇ ಪ್ರಾಯದಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವ ಅಜ್ಜಿಯ ಹೆಸರು ಕುಟ್ಟಿಯಮ್ಮ. ಕುಟ್ಟಿಯಮ್ಮ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಆಗಿದ್ದಾರೆ.ಕೊಟ್ಟಾಯಂ ಜಿಲ್ಲೆಯ ಅಯರ್‌ಕುನ್ನಮ್‌ ಪಂಚಾಯತ್‌’ನಲ್ಲಿ ಆಯೋಜಿಸಲಾಗಿದ್ದ  ಸಾಕ್ಷರತಾ ಪರೀಕ್ಷೆಯಲ್ಲಿ 104 ವರ್ಷದ ಕುಟ್ಟಿಯಮ್ಮ ಪರೀಕ್ಷೆ ಬರೆದಿದ್ದಾರೆ.ಆದರೆ ಸಾಕ್ಷರತಾ ಪ್ರೇರಕ ಕಾರ್ಯಕ್ರಮದ ಮೂಲಕ ಶಿಕ್ಷಣದ ಆಸಕ್ತಿ ಪಡೆದ 104 ವರ್ಷದ ಕುಟ್ಟಿಯಮ್ಮ ಎಲ್ಲಾ ತರಗತಿಗೆ ಹಾಜರಾಗಿದ್ದಾರೆ. ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ತನ್ನ ಮನೆಯಲ್ಲೇ ಸಾಕ್ಷರತಾ ಪ್ರೇರಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಓದುವುದು ಹಾಗೂ ಬರೆಯುವುದನ್ನು ಕಲಿತಿದ್ದಾರೆ. ಈ ತರಗತಿಗಳಿಗೆ ನಿರಂತರವಾಗಿ ಹಾಜರಾದ ಬಳಿಕ ಕುಟ್ಟಿಯಮ್ಮ ನಾಲ್ಕನೇ ತರಗತಿಯ ಪರೀಕ್ಷೆಯನ್ನು ಬರೆಯಲು ಅರ್ಹರಾಗಿದ್ದಾರೆ.

104 ವರ್ಷದ ಕುಟ್ಟಿಯಮ್ಮರಿಗೆ ವಯೋ ಸಹಜವಾಗಿ ಕಿವಿ ಕೇಳುತ್ತಿರಲಿಲ್ಲ. ಹೀಗಾಗಿ ಪರೀಕ್ಷಾ ಕೊಠಡಿಯಲ್ಲಿದ್ದ ಮೇಲ್ಬಿಚಾರಕರ ಬಳಿ ಕುಟ್ಟಿಯಮ್ಮ ಜೋರಾಗಿ ಮಾತನಾಡುವಂತೆ ಹೇಳುತ್ತಿದ್ದರು ಎಂದು ಮಲಯಾಳ ಮನೋರಮಾ ವರದಿ ಮಾಡಿದೆ.

- Advertisement -

ಜೀವನದಲ್ಲಿ ಒಂದು ಬಾರಿಯೂ ಶಾಲೆಗೆ ಹೋಗದ ಕುಟ್ಟಿಯಮ್ಮಳ ಸಾಧನೆಯನ್ನು ಕೇರಳ ಶಿಕ್ಷಣ ಸಚಿವ ವಿ. ಶಿವಂಕುಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಜ್ಞಾನದ ಲೋಕಕ್ಕೆ ಪ್ರವೇಶ ಪಡೆಯಲು ವಯಸ್ಸು ಯಾವುದೇ ಅಡೆತಡೆಯಾಗುವುದಿಲ್ಲ” ಎಂದು ಕೇರಳ ಶಿಕ್ಷಣ ಸಚಿವರು ಉಲ್ಲೇಖ ಮಾಡಿದ್ದಾರೆ.
“ಕೊಟ್ಟಾಯಂನ 104 ವರ್ಷದ ಕುಟ್ಟಿಯಮ್ಮ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪರೀಕ್ಷೆಯಲ್ಲಿ 100 ರಲ್ಲಿ 89 ಅಂಕವನ್ನು ಪಡೆದಿದ್ದಾರೆ. ಜ್ಞಾನದ ಲೋಕಕ್ಕೆ ಪ್ರವೇಶ ಪಡೆಯಲು ವಯಸ್ಸು ಯಾವುದೇ ಅಡೆತಡೆಯಾಗುವುದಿಲ್ಲ. ಅತ್ಯಂತ ಗೌರವ ಮತ್ತು ಪ್ರೀತಿಯಿಂದ, ಕುಟ್ಟಿಯಮ್ಮ ಮತ್ತು ಇತರ ಎಲ್ಲಾ ಹೊಸ ಕಲಿಕೆದಾರರಿಗೆ ನಾನು ಶುಭ ಹಾರೈಸುತ್ತೇನೆ,” ಎಂದು ಕೇರಳ ಶಿಕ್ಷಣ ಸಚಿವ ವಿ. ಶಿವಂಕುಟ್ಟಿ ಟ್ವೀಟ್‌ ಮಾಡಿದ್ದಾರೆ.



Join Whatsapp