ಕೊಡಗಿನಲ್ಲಿ ನಿರಂತರವಾಗಿ ಮುಸ್ಲಿಮರ ವಿರುದ್ಧ ಪೋಲಿಸರ ತಾರತಮ್ಯ ಧೋರಣೆ ನೀತಿ ಸಹಿಸಲು ಅಸಾಧ್ಯ: SDPI

Prasthutha|

ಮಡಿಕೇರಿ: ಜಿಲ್ಲೆಯಲ್ಲಿ ನಿರಂತರವಾಗಿ ಪೋಲಿಸ್ ಇಲಾಖೆ ಮುಸ್ಲಿಮರ ವಿರುದ್ದ ತಾರತಮ್ಯ ಧೋರಣೆಯನ್ನು ನಡೆಸಿಕೊಂಡು ಬರುತ್ತಿದ್ದು, ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯ ತೀವ್ರವಾಗಿ ಖಂಡಿಸುತ್ತದೆ ಮತ್ತು ಪೋಲಿಸರ ಇಂತಹ ಕೋಮುವಾದಿ ನೀತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು SDPI ಮಡಿಕೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಫೀ ಹೇಳಿದ್ದಾರೆ.

- Advertisement -

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ಗರಗಂದೂರಿನಲ್ಲಿ ನಡೆದ ಘಟನೆಯಲ್ಲೂ ಪೋಲಿಸ್ ಇಲಾಖೆ ತಾರತಮ್ಯ ಧೋರಣೆ ಮಾಡಿತ್ತು, ಅದೇ ರೀತಿ ಇತ್ತೀಚೆಗೆ ಶನಿವಾರಸಂತೆ ನಿವಾಸಿ ಜಾಕಿರ್ ಪಾಷ ಅವರು ತನ್ನ ಪತ್ನಿ, ಮಕ್ಕಳೊಂದಿಗೆ ಕಾರಿನಲ್ಲಿ ತನ್ನ ವೈಯಕ್ತಿಕ ಕಾರ್ಯದ ನಿಮಿತ್ತ ಮೈಸೂರಿಗೆ ಹೋಗುತ್ತಿದ್ದ ಸಂಧರ್ಭದಲ್ಲಿ ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ಸಂಘಪರಿವಾರದ ದುಷ್ಕರ್ಮಿಗಳು, ಕಾರಿಗೆ ಅಡ್ಡ ಬಂದು ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲು ಮಾಡಲು ಹೋದಂತಹ ಸಂದರ್ಭದಲ್ಲಿ ಅಮಾಯಕರ ವಿರುದ್ದವೇ ಸುಳ್ಳು ಮೊಕದ್ದಮೆ ಹಾಕಿ ಬಂಧಿಸಿರುವಂತಹ ಪೋಲಿಸರ ಕ್ರಮವೂ ಖಂಡನೀಯವಾಗಿದೆ. ಅಮಾಯಕರನ್ನು ಪೋಲಿಸರು ಕೂಡಲೆ ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಅದಲ್ಲದೇ ರಾತ್ರೊ ರಾತ್ರಿ ಅಮಾಯಕ ಯುವಕರ ಮನೆಗೆ ತೆರಳಿ ನಿಮ್ಮ ಮಗನನ್ನು ಗೂಂಡ ಕಾಯ್ದೆಯಡಿ ಬಂಧಿಸಿ ಶೂಟ್ ಮಾಡ್ತೇವೆ ಎಂದು ಅವರ ತಂದೆ ತಾಯಿಯನ್ನು ಹೆದರಿಸಿ ಅಲ್ಲಿನ ಮುಸ್ಲಿಮ್ ಸಮುದಾಯವನ್ನು ಭಯಭೀತರನ್ನಾಗಿಸಿದ ವರ್ತನೆಯು ಕೊಡಗು ಪೊಲೀಸರಿಂದ ಆಗಿರುವುದು ಖಂಡನೀಯ. ಇದೇ ಪ್ರಕರಣಕ್ಕೆ ಸಂಬಂಧಪಟ್ಟು ಶನಿವಾರಸಂತೆ ಠಾಣೆಯ ಮುಂಭಾಗ ಮಹಿಳಾ ಸ್ವಸಹಯ ಸಂಘದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಪರ ಘೋಷಣೆ ಕೂಗಿದ್ದನ್ನು ಸಂಘಪರಿವಾರ ಕಾರ್ಯಕರ್ತರು ವೀಡಿಯೋವನ್ನು ಎಡಿಟ್ ಮಾಡಿ ಪಾಕಿಸ್ತಾನ್ ಝಿಂದಾಬಾದ್ ಎಂದು ವಾಯ್ಸ್ ಎಡಿಟ್ ಮಾಡಿ ದೇಶದ್ರೋಹ ಕೃತ್ಯವನ್ನು ಎಸಗಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಘಟನೆಯಲ್ಲಿ ಸಂಘಪರಿವಾರದ ಕಾರ್ಯಕರ್ತ ನೋರ್ವನ ವಿರುದ್ಧ ಕುಶಾಲನಗರ ಮುಸ್ಲಿಂ ಒಕ್ಕೂಟದ ಸದಸ್ಯರು ದೂರು ದಾಖಲಿಸಿದ್ದರೂ FIR ಮಾಡದೇ ಕೇವಲ ಸ್ವೀಕೃತಿ ಪತ್ರವನ್ನು ನೀಡಿರುವುದು ವಿಪರ್ಯಾಸವಾಗಿದೆ ಎಂದು ಅವರು ತಿಳಿಸಿದರು.

- Advertisement -

ಅದೇ ರೀತಿ ಇತ್ತೀಚಿನ ಹಲವಾರು ಪ್ರಕರಣಗಳನ್ನು ಅಧ್ಯಯನ ಮಾಡಿದಾಗ ಮುಸ್ಲಿಮರು ಆರೋಪಿಗಳಾದರೆ ಹಲವು ಸೆಕ್ಷನ್ ಗಳನ್ನು ಹಾಕಿ ಪ್ರಕರಣ ದಾಖಲಿಸಲಾಗುತ್ತದೆ. ಅದೇ ವೇಳೆ ಸಂಘಪರಿವಾರದ ಕಾರ್ಯಕರ್ತರು ಆರೋಪಿಗಳಾದರೆ ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸಲಾಗುತ್ತದೆ, ಒಂದು ವೇಳೆ ದೂರುದಾರರ ಒತ್ತಾಯಕ್ಕೆ ಮಣಿದು FIR ಮಾಡಿದರು ಸಣ್ಣಪುಟ್ಟ ಸೆಕ್ಷನ್ ಗಳನ್ನು ಹಾಕಿ ಠಾಣೆಯಲ್ಲೇ ಜಾಮೀನು ನೀಡಲು ಅನುಕೂಲ ಮಾಡಿಕೊಡಲಾಗುತ್ತಿದೆ,ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪೋಲಿಸ್ ಇಲಾಖೆ ನ್ಯಾಯದಲ್ಲಿ ತಾರತಮ್ಯ ನಡೆಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಅವರು ಆರೋಪಿಸಿದರು.

ಈ ಎಲ್ಲಾ ಅಂಶಗಳನ್ನು ಗಮನಿಸುವಾಗ ಕೊಡಗಿನಲ್ಲಿ ಪೋಲಿಸ್ ಇಲಾಖೆಯೂ ಬಿ.ಜೆ.ಪಿ ಯ ಅಣತಿಯಂತೆ ಕೆಲಸಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪೊಲೀಸರ ದ್ವಿಮುಖ ಧೋರಣೆ ಹಾಗೂ ಸಂಘಪರಿವಾರದ ಗೂಂಡಾಗಳೊಂದಿಗೆ ಮೃದು ಧೋರಣೆ ತಾಳಿ ಅವರಿಗೆ ಬೆಂಗಾವಲಾಗಿ ನಿಂತಿರುವುದರಿಂದ ಶಾಂತಿಯುತವಾಗಿದ್ದ ಕೊಡಗು ಜಿಲ್ಲೆಯು ಅರಾಜಕತೆಯ ಕಡೆಗೆ ಸಾಗುತ್ತಿದೆ. ಇಂತಹ ದ್ವಿಮುಖ ಧೋರಣೆಗಳು ಮುಂದುವರರಸಿದರೆ ಪೋಲಿಸರ ವಿರುದ್ದ ಸಂವಿಧಾನಾತ್ಮಕವಾಗಿ ಕಾನೂನು ಹೋರಾಟಕ್ಕೆ SDPI ಸಜ್ಜಾಗಲಿದೆ ಹಾಗೂ ಬೀದಿಗಿಳಿದು ಹೋರಾಟವನ್ನು ನಡೆಸಲಿದ್ದೇವೆ ಎಂದು ಮಹಮ್ಮದ್ ಶಫೀ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಉಸ್ಮಾನ್ ಸುಂಟಿಕೊಪ್ಪ, ಅಡ್ವಕೇಟ್ ಅಬೂಬಕ್ಕರ್, ಮನ್ಸೂರ್ ಅಲಿ
ಮೇರಿ ವೆಗಸ್ ಉಪಸ್ಥಿತರಿದ್ದರು.



Join Whatsapp