ನವದೆಹಲಿ : ಪ್ರತಿರೋಧಗಳನ್ನು ಉದ್ದೇಶಪೂರ್ವಕವಾಗಿ ಭಯೋತ್ಪಾದನೆ ಅಥವಾ ದೇಶದ್ರೋಹ ಚಟುವಟಿಕೆ ಎಂಬಂತೆ ಬಿಂಬಿಸುವ ಮೂಲಕ ನಿಗ್ರಹಿಸಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯ ನಡುವೆ, ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕಿ ತೀವ್ರ ವಾಗ್ದಾಳಿ ನಡೆಸಿದ್ದಾರೆ
ಸುದ್ದಿ ಪತ್ರಿಕೆಯೊಂದರಲ್ಲಿ ಲೇಖ ಪ್ರಕಟಿಸಿ, ಬಳಿಕ ಅದನ್ನು ಬಿಡುಗಡೆಗೊಳಿಸಿರುವ ಕಾಂಗ್ರೆಸ್ ದೇಶದ ಆರ್ಥಿಕತೆ ತೀವ್ರ ಸಂಕಷ್ಟ ಎದುರಿಸುತ್ತಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಬೆದರಿಕೆ ಮತ್ತು ಒತ್ತಡಗಳ ಮೂಲಕ ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ರಾಷ್ಟ್ರೀಯ ಭದ್ರತೆಗೆ ನಕಲಿ ಬೆದರಿಕೆಯ ಪ್ರಚಾರ ಮಾಡಿ, ಜನತೆಯನ್ನು ನಿಜವಾದ ಸಮಸ್ಯೆಗಳ ಕುರಿತ ಗಮನ ಬೇರೆಡೆಗೆ ಸೆಳೆಯಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.