ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಒಡ್ಡಿದ್ದ ದುರುಳನ ಬಂಧನ

Prasthutha|

ಹೈದರಾಬಾದ್: ದೇಶಾದ್ಯಂತ ವ್ಯಾಪಕ ಚರ್ಚೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿಯ 9 ತಿಂಗಳ ಪುತ್ರಿಗೆ ಅತ್ಯಾಚಾರ ಬೆದರಿಕೆ ಪ್ರಕರಣದ ಆರೋಪಿಯನ್ನು ಹೈದರಾಬಾದ್’ನಿಂದ ಬಂಧಿಸುವಲ್ಲಿ ಮುಂಬೈ ಸೈಬರ್ ಸೆಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

- Advertisement -

ಅಮೆನಾ ಹೆಸರಿನ ಟ್ವಟರ್ ಖಾತೆಯಿಂದ ಕೊಹ್ಲಿಯ 9 ತಿಂಗಳ ಪುತ್ರಿಗೆ ಅತ್ಯಾಚಾರ ಬೆದರಿಕೆ ಹಾಕಿದವನನ್ನು ಹೈದರಬಾದ್ ಮೂಲದ ರಾಮ್’ಗಣೇಶ್ ಶ್ರೀನಿವಾಸ್ (23) ಎಂದು ಗುರುತಿಸಲಾಗಿದೆ.

ಅಮೆನಾ ಎಂಬ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದ ರಾಮ್’ಗಣೇಶ್ ಶ್ರೀನಿವಾಸ್, ಹೆಸರಿನ ಎದುರು ಪಾಕಿಸ್ತಾನದ ಧ್ವಜವನ್ನು ಹಾಕುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದ. ಇದನ್ನೇ ನಂಬಿದ ಕೆಲವರು ಪಾಕಿಸ್ತಾನದಿಂದಲೇ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ಬಂದಿದೆ ಎಂಬ ರೀತಿಯಲ್ಲಿ ಚರ್ಚೆಯನ್ನು ಮಾಡಿದ್ದರು..  

- Advertisement -

ಟ್ವೀಟ್ ವಿಚಾರವು ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಮ್’ಗಣೇಶ್ ಶ್ರೀನಿವಾಸ್, ವಮಿಕಾ ಹೆಸರಿನ ಅಕೌಂಟ್ ಡಿಲೀಟ್ ಮಾಡಿದ್ದ. ಆದರೂ ಆತನನ್ನು ಹೈದರಾಬಾದ್’ನಲ್ಲಿ ಪತ್ತೆ ಹಚ್ಚುವಲ್ಲಿ ಮುಂಬೈ ಸೈಬರ್ ಸೆಲ್ ಪೊಲೀಸರು ಯಶಸ್ವಿಯಾಗಿದ್ದಾರೆ.  

ಧರ್ಮಾಧರ ಟೀಕೆಗೆ ಗುರಿಯಾಗಿದ್ದ ತನ್ನ ಸಹ ಆಟಗಾರ ಮುಹಮ್ಮದ್ ಶಮಿಯನ್ನು ಬೆಂಬಲಿಸಿದ ಕಾರಣಕ್ಕಾಗಿ ವಿರಾಟ್ ಕೊಹ್ಲಿ ಪುತ್ರಿಯನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ ವಿಚಾರ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗುರಿಯಾಗಿತ್ತು. ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ದೆಹಲಿಯ ಮಹಿಳಾ ಆಯೋಗ, ನವೆಂಬರ್ 8ರ ಒಳಗಾಗಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ FIR, ಕೈಗೊಂಡಿರುವ ಕ್ರಮಗಳು ಹಾಗೂ ಆರೋಪಿಗಳ ವಿವರವನ್ನು ನೀಡುವಂತೆ ದೆಹಲಿಯ ಸಹಾಯಕ ಕಮೀಚನರ್’ಗೆ ಸೂಚಿಸಿತ್ತು.

ಅಮೆನಾ ಹೆಸರಿನ ಟ್ವಟರ್ ಖಾತೆಯಿಂದ ‘ಅನುಷ್ಕಾ ಶರ್ಮಾಳಿಗೆ ನಾಚಿಕೆಯಾಗಬೇಕು, ವಮಿಕಾಳ ಫೋಟೋ ಬಿಡುಗಡೆಯಾಗುವುದುನ್ನು ಕಾಯುತ್ತಿದ್ದೇನೆ, ಆಕೆಯನ್ನು ಅತ್ಯಾಚಾರ ಮಾಡುತ್ತೇನೆ ಎಂದು ರಾಮ್’ಗಣೇಶ್ ಶ್ರೀನಿವಾಸ್ ಬೆದರಿಕೆ ಹಾಕಿದ್ದ.



Join Whatsapp