ಪ್ರವಾಹ ಪೀಡಿತ ತಮಿಳುನಾಡಿನಲ್ಲಿ ಬಿಜೆಪಿ ನಾಯಕರ ಫೋಟೋಶೂಟ್| ವ್ಯಾಪಕ ಆಕ್ರೋಶ

Prasthutha|

ಚೆನ್ನೈ: ಪ್ರವಾಹ ಪೀಡಿತ ತಮಿಳುನಾಡಿನಲ್ಲಿ ಬಿಜೆಪಿ ನಾಯಕರು ಫೋಟೋಶೂಟ್ ನಡೆಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕ್ಷೇತ್ರವಾದ ಕೊಳತ್ತೂರಿಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಸೇರಿದಂತೆ ನಾಯಕರು ಪ್ರವಾಹ ಪೀಡಿತ ಪ್ರದೇಶದಲ್ಲಿ ಫೋಟೋಶೂಟ್ ಮಾಡಿದ್ದಾರೆ.

ಜಲಾವೃತ ಪ್ರದೇಶಗಳಿಗೆ ದೋಣಿಯಲ್ಲಿ ಆಗಮಿಸಿದ ಅಣ್ಣಾಮಲೈ ಜನರನ್ನುದ್ದೇಶಿಸಿ ಮಾತನಾಡುವ ದೃಶ್ಯಗಳನ್ನು ವಿವಿಧ ಕೋನಗಳಿಂದ ಚಿತ್ರೀಕರಿಸಲು ಕ್ಯಾಮೆರಾಮನ್ಗೆ ಹೇಳುತ್ತಿರುವ ವೀಡಿಯೊ ವೈರಲಾಗಿದೆ.

- Advertisement -

ವೀಡಿಯೋ ವೀಕ್ಷಿಸಿ…..

ದೃಶ್ಯಕ್ಕೆ ವಿಶ್ವಾಸಾರ್ಹತೆ ಪಡೆಯಲು ತನ್ನ ಹಿಂದೆ ನಿಂತಿದ್ದವರನ್ನು ಪಕ್ಕಕ್ಕೆ ನಿಲ್ಲುವಂತೆ ಹೇಳುತ್ತಿರುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಈ ನಡುವೆ ಸತತ ಮಳೆಯಿಂದ ಮುಳುಗಿರುವ ಚೆನ್ನೈನಲ್ಲಿ 2015 ರ ಪ್ರವಾಹ ಮರುಕಳಿಸದಂತೆ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದು, ಈ ನಡುವೆ ಬಿಜೆಪಿ ನಾಯಕರ ನಾಟಕ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ತಮಿಳುನಾಡಿನ ಉತ್ತರದ ಜಿಲ್ಲೆಗಳಾದ ಚೆನ್ನೈ, ಕಾಂಚೀಪುರಂ, ಕಡಲೂರು, ವಿಲ್ಲುಪುರಂ, ಚೆಂಗಲ್ ಪೇಟ್, ತಿರುವಳ್ಳೂರು, ರಾಣಿ ಪೆಟ್ಟಾ, ವೆಲ್ಲೂರು, ತಿರುಪತ್ತೂರು, ನಾಗಪಟ್ಟಣಂ, ಮೈಲಾಡುತುರೈ, ಕಲ್ಲ ಕುಚ್ಚಿ, ತಿರುವಣ್ಣಾಮಲೈ ಮತ್ತು ಸೇಲಂನಲ್ಲಿ ಅತಿ ಹೆಚ್ಚು ಮಳೆಯಾಗಿದೆ.

ಗುರುವಾರದಿಂದ ಶುಕ್ರವಾರದವರೆಗೆ 14 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಮತ್ತು ಏಳು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.



Join Whatsapp