ಲಖ್ನೋ: ಲಖಿಂಪುರ–ಖೇರಿಯ ರೈತರ ಹತ್ಯಾಖಾಂಡ ಹೊಸ ತಿರುವು ಪಡೆದಿದ್ದು, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾನ ಬಂದೂಕಿನಿಂದಲೇ ಗುಂಡು ಹಾರಿಸಲಾಗಿದೆ ಎಂಬುದನ್ನು ವಿಧಿ ವಿಜ್ಞಾನ ವರದಿಯು ದೃಢಪಡಿಸಿದೆ.
ಲಖಿಂಪುರ ಖೇರಿಯಲ್ಲಿ ವಿವಾದಿತ ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿ ರೈತರು ಸೇರಿದಂತೆ ನಾಲ್ವರನ್ನು ಹತ್ಯೆಗೈಯ್ಯಲಾಗಿತ್ತು.
ಆಶಿಶ್ ಮತ್ತು ಅಂಕಿತ್ ಅವರೇ ಗುಂಡು ಹಾರಿಸಿದ್ದಾರೆ ಎಂದು ರೈತರು ಆರೋಪಿಸಿದ್ದರು. ಆದರೆ ತನಿಖೆಯ ಸಂದರ್ಭದಲ್ಲಿ ಆಶಿಶ್ ಮಿಶ್ರಾ, ಪರವಾನಗಿ ಇರುವ ತನ್ನ ಬಂದೂಕಿನಿಂದ ಗುಂಡು ಹಾರಿಸಿಲ್ಲ ಎಂದು ಹೇಳಿದ್ದನು.
ಆದರೆ ಇದೀಗ ಆಶಿಶ್ ಬಂದೂಕು ಮತ್ತು ಅಂಕಿತ್ ಪಿಸ್ತೂಲ್ ನಿಂದ ಗುಂಡು ಹಾರಾಟ ನಡೆಸಲಾಗಿದೆ ಎಂದು ವಿಧಿ ವಿಜ್ಞಾನ ವರದಿಯಲ್ಲಿ ದೃಢಪಟ್ಟಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.