ನಿಯಂತ್ರಣ ತಪ್ಪಿ ಸ್ಲಮ್’ಗೆ ನುಗ್ಗಿದ ಐಷಾರಾಮಿ ಕಾರು: ಓರ್ವ ಸಾವು 9 ಮಂದಿ ಗಂಭೀರ

Prasthutha|

ಜೋಧಪುರ: ಅತಿವೇಗದ ಚಾಲನೆಯಿಂದಾಗಿ ನಿಯಂತ್ರಣ ಕಳೆದುಕೊಂಡ ಐಷಾರಾಮಿ ಆಡಿ ಕಾರೊಂದು ಹಲವು ಸ್ಕೂಟರ್’ಗಳಿಗೆ ಡಿಕ್ಕಿ ಹೊಡೆದ ಬಳಿಕ ರಸ್ತೆಯ ಪಕ್ಕದ ಜೋಪಡಿಗಳಿಗೆ ನುಗ್ಗಿದ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, 10 ಮಂದಿಯನ್ನು ಗಂಭೀರ ಗಾಯಗಳೊಂದಿಗೆ AIIMS ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ರಾಜಸ್ಥಾನದ ಜೋಧಪುರದ AIIMS ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಯ ವೇಳೆಗೆ ಘಟನೆ ನಡೆದಿದ್ದು, ಆಡಿ ಕಾರು ಚಾಲಕ ನಂದನವನ ನಿವಾಸಿ ಅಮಿತ್ ನಗರ್’ (50)ನನ್ನು ಶಾಸ್ತ್ರಿ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿ ಹಾಗೂ ಗಾಯಾಳುಗಳು ಜೋಪಡಿ ನಿವಾಸಿಗಳಾಗಿದ್ದಾರೆ. ಭೀಕರ ಅಫಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

AIIMS ಆಸ್ಪತ್ರೆಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗಾಯಾಳುಗಳ ಆರೋಗ್ಯ ಸ್ಥಿತಿಯ ಮಾಹಿತಿ ಪಡೆದಿದ್ದು, ಸೂಕ್ತ ಚಿಕಿತ್ಸೆ ನೀಡುವಂತೆ ಹಿರಿಯ ವೈದ್ಯರಿಗೆ ಸೂಚನೆ ನೀಡಿದ್ದಾರೆ. ಗಾಯಾಳುಗಳ ಕುಟುಬಸ್ಥರ ಜೊತ ಸಿಎಂ ಮಾತುಕತೆ ನಡೆಸಿದ್ದಾರೆ.



Join Whatsapp