ಕೋವಿಡ್ ಪರಿಣಾಮ: ದೇಶದಲ್ಲಿ 33 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಅಪೌಷ್ಟಿಕತೆ

Prasthutha|

ನವದೆಹಲಿ : ದೇಶದಲ್ಲಿ 33 ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ 17.7 ಲಕ್ಷ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (WDC) ಮಾಹಿತಿ ನೀಡಿದೆ. RTI ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಮಹರಾಷ್ಟ್ರದಲ್ಲಿ ಅತೀ ಹೆಚ್ಚಾಗಿದ್ದು, ಬಿಹಾರ ಹಾಗೂ ಗುಜರಾತ್ ರಾಜ್ಯಗಳು ನಂತರದ ಸ್ಥಾನದಲ್ಲಿದೆ ಎಂದು WDC ಹೇಳಿದೆ.

- Advertisement -


ಕೋವಿಡ್ ಕಾರಣದಿಂದಾಗಿ ಬಡವರ ಮಕ್ಕಳಲ್ಲಿ ಆರೋಗ್ಯ ಮತ್ತು ಪೌಷ್ಟಿಕಾಂಶದ ಸಮಸ್ಯೆಯು ಹಿಂದೆಂದಿಗಿಂತಲೂ ಹೆಚ್ಚಾಗಿದೆ. 17,76,902 ಲಕ್ಷ ಮಕ್ಕಳಲ್ಲಿ ತೀವ್ರತರವಾದ ಅಪೌಷ್ಟಿಕ ಸಮಸ್ಯೆ ಹಾಗೂ 15,46,420ಲಕ್ಷ ಮಕ್ಕಳಲ್ಲಿ ಮಧ್ಯಮ ತೀವ್ರ ಅಪೌಷ್ಟಿಕತೆ ಸಮಸ್ಯೆಯಿದೆ ಎಂದು WDC ತನ್ನ ಉತ್ತರದಲ್ಲಿ ಹೇಳಿದೆ. ಕರ್ನಾಟಕದಲ್ಲಿ 2,49, 463 ಮಕ್ಕಳು ಪೌಷ್ಟಿಕಾಂಶದ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ.
34 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಸಂಗ್ರಹಿಸಲಾದ ದತ್ತಾಂಶಗಳಿಂದ ಒಟ್ಟು 33,23,332 ಲಕ್ಷ ಮಕ್ಕಳು ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಪೌಷ್ಟಿಕಾಂಶದ ಫಲಿತಾಂಶಗಳು ಕ್ಲಪ್ತ ಸಮಯದಲ್ಲಿ ದೊರಕಲು ಸರಕಾರವೇ ಅಬಿವೃದ್ಧಿಪಡಿಸಿದ ಪೋಷಣ್ ಟ್ರ್ಯಾಕರ್ ಆ್ಯಪ್’ ನಲ್ಲಿ ಈ ಮಾಹಿತಿಗಳನ್ನು ನೀಡಲಾಗಿದೆ.


ಅಂಗನವಾಡಿಯಲ್ಲಿ ದಾಖಲಾತಿ ಹೊಂದಿರುವ ಆರು ವರ್ಷದ ಒಳಗಿನ 8.19 ಕೋಟಿ ಮಕ್ಕಳಲ್ಲಿ 33 ಲಕ್ಷ ಮಕ್ಕಳು ಅಂದರೆ ಶೇ. 4.4 ಮಕ್ಕಳು ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ ಮಾಹಿತಿ ನೀಡಿದೆ.



Join Whatsapp