ಒಂದೇ ಒಂದು ಪಂದ್ಯ ಸೋತು ವಿಶ್ವಕಪ್’ನಿಂದ ಹೊರನಡೆದ ದಕ್ಷಿಣ ಆಫ್ರಿಕಾ..!

Prasthutha|

ಶಾರ್ಜಾ: ಕ್ರಿಕೆಟ್ ಜಗತ್ತಿನಲ್ಲಿ ಚೋಕರ್ಸ್ ಹಣೆಪಟ್ಟಿ ಹೊತ್ತಿರುವ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ಮಹತ್ವದ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದೆ. ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದ 5 ಪಂದ್ಯಗಳಲ್ಲಿ 4ರಲ್ಲೂ ಗೆಲುವು ಸಾಧಿಸಿದರೂ ಸೆಮಿಫೈನಲ್ ಹೋರಾಟ ಕಾಣದೆ ಟೂರ್ನಿಯಿಂದ ಹೊರನಡೆದಿದೆ.

- Advertisement -

ಗ್ರೂಪ್-1ರಲ್ಲಿ ಎಲ್ಲಾ 6 ತಂಡಗಳು ಐದು ಪಂದ್ಯಗಳನ್ನಾಡಿದ್ದು, ಮೂರು ತಂಡಗಳು ತಲಾ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ ರನ್’ರೇಟ್ ಆಧಾರದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ಪ್ರವೇಶಿಸಿದರೆ, ದಕ್ಷಿಣ ಆಫ್ರಿಕಾ ನಿರಾಸೆ ಅನುಭವಿಸಿದೆ. ಇಂಗ್ಲೆಂಡ್ +2.464, ಆಸ್ಟ್ರೇಲಿಯಾ +1. 216 ರನ್’ರೇಟ್ ಹೊಂದಿದ್ದರೆ, ಆಫ್ರಿಕಾ +0.739 ರನ್ ರೇಟ್ ಹೊಂದಿತ್ತು.

ಶನಿವಾರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ  ದಕ್ಷಿಣ ಆಫ್ರಿಕಾ ಭಾರೀ ಅಂತರದಲ್ಲಿ ಗೆಲುವು ಸಾಧಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು.  ಆಸ್ಟ್ರೆಲಿಯಾದ ರನ್’ರೇಟ್ ಮೀರಿಸಬೇಕಾದರೆ ಇಂಗ್ಲೆಂಡ್ ತಂಡವನ್ನು 131 ರನ್’ಗಳಿಗೆ ನಿಯಂತ್ರಿಸಬೇಕಾಗಿತ್ತು. ಆದರೆ 15ನೇ ಓವರ್’ನಲ್ಲೇ ಇಂಗ್ಲೆಂಡ್ 131 ರನ್ ಗಟಿ ದಾಟುತ್ತಲೇ ದಕ್ಷಿಣ ಆಫ್ರಿಕಾ ನಾಯಕನ ಮುಖದಲ್ಲಿ ನಿರಾಸೆಯ ಭಾವ ಮೂಡಿತ್ತು.

- Advertisement -

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿತ್ತು. ವೆನ್ ಡರ್ ಡಸ್ಸೆನ್ ಅಬ್ಬರದ 94 ರನ್’ ಹಾಗೂ ಮಾರ್ಕಂ ಗಳಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಆಫ್ರಿಕಾ  2 ವಿಕೆಟ್ ನಷ್ಟದಲ್ಲಿ 189 ರನ್ ಕಲೆಹಾಕಿತ್ತು. ಚೇಸಿಂಗ್ ವೇಳೆ ಇಂಗ್ಲೆಂಡ್ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 179 ರನ್’ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 10 ರನ್’ಗಳ ಅಂತರದಲ್ಲಿ ದಕ್ಷಿಣಾ ಆಫ್ರಿಕಾಗೆ ಶರಣಾಯಿತು.

ಅಂತಿಮ ಓವರ್’ನಲ್ಲಿ ಇಂಗ್ಲೆಂಡ್ ಗೆಲುವಿಗೆ 13 ರನ್’ಗಳ ಅಗತ್ಯವಿತ್ತು. ಕಗಿಸೊ ರಬಾಡ ಎಸೆದ ಓವರ್’ನ ಮೊದಲ ಮೂರು ಎಸೆತಗಳಲ್ಲಿ ಕ್ರಿಸ್ ವೋಕ್ಸ್, ಇಯಾನ್ ಮಾರ್ಗನ್ ಹಾಗೂ ಕ್ರಿಸ್ ಜೋರ್ಡಾನ್ ವಿಕೆಟ್ ಪಡೆಯುವ ಮೂಲಕ ರಬಾಡಹ್ಯಾಟ್ರಿಕ್ ಸಾಧನೆ ಮಾಡಿದರು.  



Join Whatsapp