EPL: ಮ್ಯಾಂಚೆಸ್ಟರ್’ನಲ್ಲಿ ಬದ್ಧ ವೈರಿಗಳ ಹಣಾಹಣಿ

Prasthutha|

ಮ್ಯಾಂಚೆಸ್ಟರ್: ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಶನಿವಾರ ಸಂಜೆ ನಡೆಯುವ ಬಲಿಷ್ಠರ ಹಣಾಹಣಿಯಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಮ್ಯಾಚೆಸ್ಟರ್ ಸಿಟಿ ತಂಡವನ್ನು ಎದುರಿಸಲಿದೆ.

- Advertisement -

ಭಾರತೀಯ ಕಾಲಮಾನ ಶನಿವಾರ ಸಂಜೆ 6 ಗಂಟೆಗೆ ಮ್ಯಾಂಚೆಸ್ಟರ್ ಯುನೈಟೆಡ್’ನ ತವರು ಮೈದಾನ ಓಲ್ಡ್ ಟ್ರಾಫರ್ಡ್’ನಲ್ಲಿ ಪಂದ್ಯ ನಡೆಯಲಿದ್ದು, ತೀವ್ರ ಪೈಪೋಟಿ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಪ್ರಸಕ್ತ ಆವೃತ್ತಿಯ EPL ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮ್ಯಾಂಚೆಸ್ಟರ್’ ತಂಡಗಳು ಮುಖಾಮುಖಿಯಾಗುತ್ತಿದ್ದು, ಡರ್ಬಿ ಕದನ ಉಭಯ ತಂಡಗಳಿಗೂ ಪ್ರತಿಷ್ಠೆಯ ಪಂದ್ಯವಾಗಿದೆ.

ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ 2009ರ ಬಳಿಕ ಇದೇ ಮೊದಲ ಬಾರಿಗೆ ಮ್ಯಾಂಚೆಸ್ಟರ್ ಡರ್ಬಿ ಪಂದ್ಯದಲ್ಲಿ ಮೈದಾನಕ್ಕಿಳಿಯಲಿದ್ದು, ಎದುರಾಳಿ ಸಿಟಿ ತಂಡದ ಚಾಣಕ್ಯ ಕೋಚ್ ಪೆಪ್ ಗಾರ್ಡಿಯೋಲಾ, ರೊನಾಲ್ಡೋರನ್ನು ನಿಯಂತ್ರಿಸಲು ಯಾವ ತಂತ್ರಗಳನ್ನು ಹೆಣೆಯಲಿದ್ದಾರೆ ಎಂಬ ಕುತೂಹಲ ಫುಟ್ಬಾಲ್ ಅಭಿಮಾನಿಗಳಲ್ಲಿ ಮೂಡಿದೆ.

- Advertisement -

ಇಂಗ್ಲಿಷ್ ಪ್ರೀಮಿಯರ್ ಲೀಗ್’ ಫುಟ್ಬಾಲ್’ಗೆ ಮರಳಿದ ಬಳಿಕ 11 ಪಂದ್ಯಗಳಲ್ಲಿ 9 ಗೋಲು ಗಳಿಸಿರುವ ರೊನಾಲ್ಡೊ ಅತ್ಯುತ್ತಮ ಫಾರ್ಮ್’ನಲ್ಲಿದ್ದಾರೆ. ಮತ್ತೊಂದೆಡೆ ವಿಶ್ವದ ಅತ್ಯುತ್ತಮ ಮಿಡ್ ಫೀಲ್ಡರ್ ಕೆವಿನ್ ಡಿ ಬ್ರ್ಯುನೆ ಚಾಣಾಕ್ಷನತನದ ಪಾಸ್’ಗಳು ಸಿಟಿ ತಂಡದ ಫಾರ್ವರ್ಡ್ ಆಟಗಾರರಿಗೆ ಗೋಲು ಗಳಿಸಲು ಅವಕಾಶ ಸೃಷ್ಟಿಸುವ ಸಾಧ್ಯತೆಯಿದೆ.

ಒಂದೇ ನಗರದ ಎರಡು ತಂಡಗಳು ಇದುವರೆಗೆ 185 ಬಾರಿ ಮುಖಾಮುಖಿಯಾಗಿದೆ. ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದ ಬಳಿಕ ನಡೆದ 48 ಪಂದ್ಯಗಳಲ್ಲಿ 24 ಪಂದ್ಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಗೆಲುವು ಸಾಧಿಸಿದೆ. ಕಳೆದ 4 ಡರ್ಬಿ ಪಂದ್ಯಗಳಲ್ಲಿ ಮೂರರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಗೆಲುವು ಸಾಧಿಸಿದರೆ ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.

Join Whatsapp