ದೆಹಲಿ | ನಿಷೇಧದ ನಡುವೆಯೂ ಪಟಾಕಿ ಮಾರಾಟ ಮತ್ತು ಸರಬರಾಜು: 281 ಜನರ ಬಂಧನ

Prasthutha|

ಹೊಸದಿಲ್ಲಿ: ದೆಹಲಿಯಲ್ಲಿ ನಿಷೇಧದ ನಡುವೆಯೂ ಭಾರಿ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಲಾಗಿದ್ದು,ಈ ಸಂಬಂಧ ಪೊಲೀಸರು 281 ಜನರನ್ನು ಬಂಧಿಸಿದ್ದಾರೆ.

- Advertisement -


ಪೊಲೀಸರು ಒದಗಿಸಿದ ಮಾಹಿತಿಯ ಪ್ರಕಾರ,138 ಜನರನ್ನು ಪಟಾಕಿಗಳನ್ನು ಮಾರಾಟ ಮತ್ತು ಸರಬರಾಜು ಮಾಡಿದ್ದಕ್ಕಾಗಿ ಮತ್ತು 143 ಜನರನ್ನು ಸಿಡಿಸಿದ್ದಕ್ಕಾಗಿ ಬಂಧಿಸಲಾಗಿದೆ.


ಸೆಪ್ಟೆಂಬರ್ 29 ರಿಂದ ಗುರುವಾರ ದೀಪಾವಳಿಯ ನಡುವೆ ಪಟಾಕಿ ಸಿಡಿಸಿದವರ ವಿರುದ್ಧ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
ದೆಹಲಿಯಲ್ಲಿಒಟ್ಟು 19,702.489 ಕೆಜಿ ತೂಕದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.



Join Whatsapp