ಎಲೋನ್ ಮಸ್ಕ್ ತನಗೆ ಕಲಿಸಿದ ದೊಡ್ಡ ಪಾಠವೊಂದನ್ನು ಬಹಿರಂಗಪಡಿಸಿದ ಆನಂದ್ ಮಹೀಂದ್ರಾ!

Prasthutha|

ಮುಂಬೈ: ಎಲೋನ್ ಮಸ್ಕ್ ಅಮೆರಿಕದ ವಾಹನೋದ್ಯಮಕ್ಕೆ ಹೊಸ ದಿಕ್ಕನ್ನು ನೀಡಿದ ಬಿಲಿಯನೇರ್. ಮಸ್ಕ್ ತನ್ನ ಟೆಸ್ಲಾ ಎಲೆಕ್ಟ್ರಿಕ್ ವಾಹನ ಕಂಪನಿಯ ಮೂಲಕ ಹೆಸರುವಾಸಿಯಾಗಿದ್ದಾರೆ.

- Advertisement -


ಭಾರತೀಯರ ವಾಹನದ ಕನಸುಗಳಿಗೆ ರೆಕ್ಕೆ ನೀಡಿದವರಲ್ಲಿ ಮಹೀಂದ್ರಾ ಗ್ರೂಪ್ ನ ಚೇರ್ಮೆನ್ ಆನಂದ್ ಮಹೀಂದ್ರಾ ಕೂಡಾ ಒಬ್ಬರು. ವಿದೇಶಿ ಕಂಪನಿಗಳ ಸಹಾಯವಿಲ್ಲದೆ ತನ್ನದೇ ಆದ ವಾಹನಗಳು ಮತ್ತು ಎಂಜಿನ್ ಗಳನ್ನು ಅಭಿವೃದ್ಧಿಪಡಿಸಿದ ಭಾರತೀಯ ತಯಾರಕ ಮಹೀಂದ್ರಾ.

ಆನಂದ್ ಮಹೀಂದ್ರ ಅವರು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರಿಂದ ಕಲಿತ ಪಾಠವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
EV ಜಗತ್ತಿನಲ್ಲಿ ಟೆಸ್ಲಾದ ಪ್ರಾಬಲ್ಯ ಮತ್ತು ಎಲೋನ್ ಮಸ್ಕ್ ಅವರ ಪರಿಶ್ರಮವನ್ನು ಆನಂದ್ ಮಹೀಂದ್ರಾ ಕೊಂಡಾಡಿದ್ದಾರೆ. ಆನಂದ್ ಮಹೀಂದ್ರಾ ಹೇಳುವಂತೆ ಮಸ್ಕ್ ತನಗೆ ಕಲಿಸಿದ ಅತೀ ದೊಡ್ಡ ಪಾಠವೆಂದರೆ ‘ಎಂದಿಗೂ ಸೋಲೊಪ್ಪಬೇಡ’ ಎಂದಾಗಿದೆ.

- Advertisement -

‘ಮೂರು ವರ್ಷಗಳ ಹಿಂದೆ ಎಲೋನ್ ಮಸ್ಕ್‌ ನಮಗೆ ಪ್ರೋತ್ಸಾಹದ ಸಂದೇಶವನ್ನು ಕಳುಹಿಸುತ್ತಾರೆ ಎಂದು ನಂಬಿದ್ದೆ. ಆ ಸಮಯದಲ್ಲಿ ಅವರು ಹತಾಶೆಯ ಮತ್ತು ಏನಾದರೂ ಕೆಟ್ಟದು ಸಂಭವಿಸಲಿದೆ ಎಂದು ನಂಬಿದ್ದ ವ್ಯಕ್ತಿಯಾಗಿದ್ದರು. ಆದರೆ ಈಗ ಅವರು 300 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿರುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಎಂದಿಗೂ ಸೋಲಪ್ಪಬಾರದು, ನಮ್ಮ ಬಗ್ಗೆ ಆತ್ಮವಿಶ್ವಾಸವನ್ನು ಹೊಂದಿರಬೇಕು ಎಂಬುದನ್ನು ನಾವು ಇದರಿಂದ ಕಲಿಯಬಹುದು’ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.



Join Whatsapp