ನ. 6, 7 – ಎಸ್.ಡಿ.ಪಿ.ಐ ನೂತನ ನಾಯಕರ ಅಯ್ಕೆಗಾಗಿ ರಾಜ್ಯ ಪ್ರತಿನಿಧಿ ಸಭೆ

Prasthutha|

ಬೆಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಪ್ರತಿನಿಧಿ ಸಭೆ ನವೆಂಬರ್ 6,7 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ತಿಳಿಸಿದ್ದಾರೆ. ರಾಷ್ಟ್ರಿಯ ಅಧ್ಯಕ್ಷ ಎಮ್. ಕೆ. ಫೈಝಿ ಮತು ಕೇಂದ್ರ ನಾಯಕರು ಆಂತರಿಕ ಚುನಾವಣೆಯ ಪ್ರಕ್ರಿಯೆ ಉಸ್ತುವಾರಿ ವಹಿಸಲಿದ್ದಾರೆ.

- Advertisement -

ರಾಜ್ಯದ ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳು, ವಿಶೇಷ ಅಹ್ವಾನಿತರು ಮತ್ತು ಆಯ್ಕೆಯಾಗಿರುವ ಪಕ್ಷದ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆಂತರಿಕ ಪ್ರಜಾಪ್ರಭುತ್ವ ದಂತೆ ಜಿಲ್ಲಾ ನಾಯಕರು ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಿದ್ದಾರೆ. ನೂತನ ರಾಜ್ಯ ಸಮಿತಿ ಪ್ರತ್ಯೇಕ ಸಭೆ ನಡೆಸಿ ರಾಜ್ಯಾಧ್ಯಕ್ಷ ಮತ್ತು ಇತರ ಪದಾಧಿಕಾರಿಗಳಿಗೆ ಮತ ಹಾಕಿ ಆಯ್ಕೆ ಮಾಡಲಿದ್ದಾರೆ. ಈ ಬಾರಿ ರಾಜ್ಯ ಸಮಿತಿಗೆ 27 ಮಂದಿಯನ್ನು ಆಯ್ಕೆ ಮಾಡಲು ರಾಷ್ಟ್ರೀಯ ಸಮಿತಿ ಅನುಮೋದನೆ ನೀಡಿದೆ.


ಕಳೆದ 3 ತಿಂಗಳಿನಿಂದ ಬೂತ್ ಮಟ್ಟದಿಂದ, ಬ್ರಾಂಚ್, ವಾರ್ಡ್, ನಗರ, ಗ್ರಾಮ, ಬ್ಲಾಕ್, ಅಸೆಂಬ್ಲಿ ಮತ್ತು ಜಿಲ್ಲಾ ಸಮಿತಿಗಳ ರಚನೆ ಕೆಲಸ ಪಾರದರ್ಶಕವಾಗಿ ನಡೆಸಲಾಗಿದೆ. ಪಕ್ಷದ ಕೇಡರ್ ಗಳು ಮತ ಹಾಕಿ ಎಲ್ಲಾ ಹಂತದ ನಾಯಕರನ್ನು ಆಯ್ಕೆ ಮಾಡಿದ್ದಾರೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾದರಿಯಾಗುವಂತಹ ಮುಕ್ತ, ನ್ಯಾಯ ಸಮ್ಮತ ಮತ್ತು ಪಕ್ಷದ ಸಂವಿಧಾನದಡಿ ಆಂತರಿಕ ಚುನಾವಣೆ ನಡೆದಿದೆ.

- Advertisement -

ರಾಜ್ಯದ ಮುಖ್ಯ ಚುನಾವಣಾಧಿಕಾರಿಯಾಗಿ ಅಬ್ಬುಲ್ ಜಲೀಲ್ ಕೃಷ್ಣಪುರ ಜವಾಬ್ದಾರಿಯನ್ನು ನಿರ್ವಹಿಸಿದ್ದರು.
ಎರಡು ದಿನದ ರಾಜ್ಯ ಪ್ರತಿನಿಧಿ ಸಭೆಯಲ್ಲಿ ಕಳೆದ ಮೂರೂವರೆ ವರ್ಷದ ಕಾರ್ಯ ಚಟುವಟಿಕೆಗಳ ಸಮಗ್ರ ವರದಿ ಮಂಡಿಸಲಾಗುವುದು. ಪಕ್ಷದ ಮುಂದಿನ ಯೋಜನೆಗಳ ಬಗ್ಗೆ ಪ್ರತಿನಿಧಿಗಳು ಮುಕ್ತ ಚರ್ಚೆ ನಡೆಸಲಿದ್ದಾರೆ. ರಾಷ್ಟ್ರಿಯಾ ಅಧ್ಯಕ್ಷರು ಪತ್ರಿಕಾ ಗೋಷ್ಠಿ ನಡೆಸಲಿದ್ದಾರೆ. ನವೆಂಬರ್ 7 ರಂದು ರಾಜ್ಯದ ಪದಾಧಿಕಾರಿಗಳ ಪದಗ್ರಹಣ ಸಹ ನಡೆಯಲಿದೆ.


ಇದೆ ರೀತಿಯಲ್ಲಿ ರಾಷ್ಟ್ರಿಯ ಪ್ರತಿನಿಧಿ ಸಭೆಯು ನವೆಂಬರ್ 22 ಮತ್ತು 23 ರಂದು ತಮಿಳುನಾಡಿನಲ್ಲಿ ಜರಗಲಿದೆ ಎಂದು ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಚುನಾವಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.



Join Whatsapp