ಲಕ್ನೋ: ಈ ಬಾರಿಯ ದೀಪಾವಳಿ ಆಚರಣೆಯು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ದುರಾಡಳಿತವನ್ನು ಅಂತ್ಯಗೊಳಿಸಲಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.
ದೀಪಾವಳಿ ಮತ್ತು ಗೋವರ್ಧನ್ ಪೂಜಾ ಶುಭಾಶಯ ಕೋರಿದ ಅಖಿಲೇಶ್, ಭಾರತದಲ್ಲಿ ಆಚರಣೆಗಳು ಸೌಹಾರ್ದ, ಶಾಂತಿ ಮತ್ತು ಪರಸ್ಪರ ಪ್ರೀತಿಯ ಸಂದೇಶವನ್ನು ಹರಡುತ್ತವೆ. ಈ ದೀಪಾವಳಿಯು ಕೂಡಾ ಅದೇ ಸಂದೇಶವನ್ನು ನೀಡುತ್ತದೆ ಎಂದು ಹೇಳಿದರು.
ಬಿಜೆಪಿಯ ಕರಾಳ ಕಾನೂನುಗಳಿಂದ ರೈತರು, ನಿರುದ್ಯೋಗಿಗಳು, ಬಡವರು, ಯುವಕರ ಬದುಕು ದುಸ್ತರವಾಗಿದ್ದು, ಈ ದೀಪಾವಳಿ ವೇಳೆಗೆ ಎಲ್ಲ ದೀಪಗಳೂ ಬೆಳಕನ್ನು ಚೆಲ್ಲಿ ದುರಾಡಳಿತ ಕೊನೆಗೊಳ್ಳಲಿ ಎಂದು ಅವರು ಹಾರೈಸಿದ್ದಾರೆ.