32 ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿ: ರಾಜಸ್ತಾನದಲ್ಲಿ ಕಾಂಗ್ರೆಸ್, ಮಧ್ಯಪ್ರದೇಶ, ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ

Prasthutha|

ನವದೆಹಲಿ: ಹದಿಮೂರು ರಾಜ್ಯಗಳು ಮತ್ತು ದಾದ್ರಾ, ನಗರ್ ಹವೇಲಿ ಕೇಂದ್ರಾಡಳಿತ ಪ್ರದೇಶಗಳ 32 ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ನಡೆದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ರಾಜಸ್ತಾನದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದರೆ, ಮಧ್ಯಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ.

- Advertisement -


ಕರ್ನಾಟಕದ ಸಿಂಧಗಿಯಲ್ಲಿ ಬಿಜೆಪಿ, ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಹರ್ಯಾಣದ ಎಲ್ಲೆನಬಾದ್ ಕ್ಷೇತ್ರದಲ್ಲಿ ಐಎನ್ ಎಲ್ ಡಿಯ ಅಭಯ್ ಚೌಟಾಲ ಅವರು ಬಿಜೆಪಿಯ ಗೋವಿಂದ ಕಂಡಾ ವಿರುದ್ಧ ಅಲ್ಪ ಮುನ್ನಡೆಯಲ್ಲಿದ್ದಾರೆ. ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದರೆ, ರಾಜಸ್ತಾನದ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೆಲುವಿನ ನಗೆ ಬೀರುವ ಸಾಧ್ಯತೆ ಇದೆ.


ಮೂರು ಹೊಸ ಕೇಂದ್ರ ಕೃಷಿ ಕಾನೂನುಗಳನ್ನು ವಿರೋಧಿಸಿ ಹರಿಯಾಣ ಅಸೆಂಬ್ಲಿಯನ್ನು ತೊರೆದ ಐಎನ್‌ಎಲ್‌ಡಿ ನಾಯಕ ಅಭಯ್ ಚೌಟಾಲಾ, ದಿವಂಗತ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪತ್ನಿ ಕಾಂಗ್ರೆಸ್‌ ನ ಪ್ರತಿಭಾ ಸಿಂಗ್, ಮಾಜಿ ರಾಷ್ಟ್ರೀಯ ಫುಟ್ಬಾಲ್ ಆಟಗಾರ ಯುಜೆನೆಸನ್ ಲಿಂಗ್ಡೋಹ್ ಮತ್ತು ತೆಲಂಗಾಣದ ಮಾಜಿ ಸಚಿವ ಈಟಾಲಾ ರಾಜೇಂದರ್ ಮುಂತಾದವರ ಹಣೆಬರಹ ಇಂದು ಬಹಿರಂಗವಾಗಲಿದೆ.



Join Whatsapp