ಜೋಕರ್ ವೇಷ ಧರಿಸಿ ಟ್ರೈನ್’ ನಲ್ಲಿ ಹುಚ್ಚಾಟ: ಗುಂಡು ಹಾರಿಸಿದ ಬಳಿಕ ಬೆಂಕಿ ಹಚ್ಚಲು ಯತ್ನ

Prasthutha|

ಟೋಕಿಯೋ: ‘ಜೋಕರ್’ ವೇಷ ಧರಿಸಿ ನಗರ ಸಾರಿಗೆಯ ಟ್ರೇನ್ ಹತ್ತಿದ ಯುವಕನೋರ್ವ ಮನಬಂದಂತೆ ಗುಂಡು ಹಾರಿಸಿದ ಬಳಿಕ ಹರಿತವಾದ ಆಯುಧ ಬಳಸಿ ಹಲವು ಪ್ರಯಾಣಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಪಾನ್’ನ ಟೋಕಿಯೋ ನಗರದಲ್ಲಿ ನಡೆದಿದೆ.

- Advertisement -


ಟೋಕಿಯೋದ ಶಿಂಜಿಕು ನಿಲ್ಲಾಣಕ್ಕೆ ತೆರಳುತ್ತಿದ್ದ ವೇಗಧೂತ ಕೆಯೊ ಟ್ರೈನ್’ಗೆ, ಕೊಕುರ್ಯೊ ನಿಲ್ದಾಣದ ಬಳಿ 24 ವರ್ಷದ ಕ್ಯೋಟ ಹಟ್ಟೋರಿ ಎಂಬಾತ, ಪ್ರಖ್ಯಾತ ‘ಜೋಕರ್’ ಪಾತ್ರದ ವೇಷಧರಿಸಿ ಪ್ರವೇಶಿಸಿ ಕಿಕ್ಕಿರಿದು ತುಂಬಿದ್ದ ಟ್ರೈನ್ ಬೋಗಿಯೊಳಗೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಬಳಿಕ ತನ್ನ ಬಳಿ ಇದ್ದ ಹರಿತವಾದ ಆಯುಧದಿಂದ 70 ವರ್ಷ ವಯಸ್ಸಿನ ವೃದ್ಧರೋರ್ವರು ಸೇರಿದಂತೆ 17ಕ್ಕೂ ಹೆಚ್ಚು ಪ್ರಯಾಣಿಕರಿಗೆ ಇರಿದಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಟೋಕಿಯೋ ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.


ಹಟ್ಟೋರಿ ಹುಚ್ಚುತನ ಇಷ್ಟಕ್ಕೆ ನಿಂತಿರಲಿಲ್ಲ. ಚಾಕುವಿನಿಂದ ಹಲವರಿಗೆ ಇರಿದ ಬಳಿಕ ತನ್ನ ಬ್ಯಾಗ್’ನಿಂದ ಬಾಟಲಿಯೊಂದನ್ನು ಹೊರತೆಗೆದು ಅದರಲ್ಲಿದ್ದ ಲಿಕ್ವಿಡ್’ಅನ್ನು ಬೋಗಿಯಲ್ಲಿ ಚೆಲ್ಲಿ ಬಳಿಕ ಬಂಕಿ ಹಚ್ಚಿದ್ದಾನೆ. ಇದರಿಂದಾಗಿ ಬೋಗಿಯಲ್ಲಿದ್ದ ಹಲವು ಸೀಟುಗಳು ಬೆಂಕಿಗೆ ಆಹುತಿಯಾಗಿದೆ.
ಯುವಕನ ದಾಳಿಯಿಂದ ಭಯಭೀತರಾದ ಪ್ರಯಾಣಿಕರು ಎಮರ್ಜೆನ್ಸಿ ಬಟನ್ ಬಳಸಿ ಟ್ರೈನ್’ಅನ್ನು ನಿಲ್ಲಿಸಿದ್ದಾರೆ. ಬಳಿಕ ಜೀವ ಉಳಿಸಿಕೊಳ್ಳಲು ಕಿಟಕಿಗಳ ಮೂಲಕ ಹೊರಗಡೆ ಜಿಗಿದಿದ್ದಾರೆ. ಸಾಕಷ್ಟು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ವೈದ್ಯಕೀಯ ಸಿಬ್ಬಂದಿ ಮಾಹಿತಿ ತಿಳಿಯುತಲ್ಲೇ ರಕ್ಷಣಾ ಕಾರ್ಯಾಚರಣೆ ನಡೆಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

- Advertisement -


ದಾಳಿ ನಡೆಸಿದಾತ ಬ್ಯಾಟ್’ಮನ್ ಕಾಮಿಕ್ಸ್’ನಲ್ಲಿ ಕಾಣಿಸಿಕೊಳ್ಳುವ ಜೋಕರ್ ವೇಷ ಧರಿಸಿದ್ದ ಎಂದು ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಟೋಕಿಯೋ ಮೆಟ್ರೋಪಾಲಿಟನ್ ಪೊಲೀಸರು ಕ್ಯೋಟ ಹಟ್ಟೋರಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈತ ಏಕಾಏಕಿ ದಾಳಿ ನಡೆಸಲು ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

https://t.co/BnEpyEyyFv https://twitter.com/anthraxxx781/status/1454785302686355465?s=20



Join Whatsapp