ಅ.28ರಂದು ಭಾರತದಲ್ಲಿ ಎಲ್.ಜಿ. ಡುಯಲ್ ಸ್ಕ್ರೀನ್ ಮೊಬೈಲ್ ಬಿಡುಗಡೆ ನಿರೀಕ್ಷೆ

Prasthutha|

ಅಕ್ಟೋಬರ್ 28ರಂದು ಎಲ್.ಜಿ ಭಾರತದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು, ಇಲ್ಲಿ ತನ್ನ ಹೊಸ ಫೋನನ್ನು ಅನಾವರಣೆಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ದಕ್ಷಿಣ ಕೊರಿಯದ ಕಂಪೆನಿಯು ಈ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಆಹ್ವಾನವನ್ನು ಕಳುಹಿಸಿದೆ. ಏನನ್ನು ಅನಾವರಣಗೊಳಿಸಲಿದೆಯೆಂಬ ಮಾಹಿತಿಯನ್ನು ಅದು ನೀಡಿಲ್ಲ.

- Advertisement -

ತನ್ನ ತಿರುಗಿಸಬಹುದಾದ ಡುಯಲ್ ಸ್ಕ್ರೀನ್ ಫೋನ್ ‘ವಿಂಗ್ ಇನ್ ಇಂಡಿಯಾ’ವನ್ನು ಎಲ್.ಜಿ ಈ ತಿಂಗಳ ಕೊನೆಯಲ್ಲಿ ಬಿಡುಗಡೆಗೊಳಿಸಲಿರುವುದಾಗಿ ಮಾಹಿತಿ ದೊರೆತಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. ಎಲ್.ಜಿ ವಿಂಗ್ ಮೊಬೈಲ್ ಫೋನ್ ಈಗಾಗಲೇ ಕೆಲವು ಸಮಯಗಳ ಹಿಂದೆ ಜಾಗತಿಕ ಮಾರುಕಟ್ಟೆಗೆ ಕಾಲಿಟ್ಟಿದ್ದು, ಡುಯೆಲ್ ಸ್ಕ್ರೀನ್ ಫೋನ್ ಗಳು ಹೇಗೆ ಕಾಣಿಸುತ್ತದೆ ಮತ್ತು ಕೆಲಸ ಮಾಡುತ್ತದೆಯೆಂಬುದನ್ನು ತೋರಿಸಿಕೊಟ್ಟಿತ್ತು.

ಎಲ್.ಜಿ ವಿಂಗ್ ನಲ್ಲಿ ಸಣ್ಣ ಸ್ಕ್ರೀನ್ ಮೇಲೆ ದೊಡ್ಡ ಸ್ಕ್ರೀನ್ ಅನ್ನು ಅಳವಡಿಸಲಾಗಿದೆ. ಸ್ಕ್ರೀನ್ ಡಿಸ್ಪ್ಲೆಯು ಅಡ್ಡಲಾಗಿ ‘ಟಿ’ ಆಕಾರದಲ್ಲಿ ತೆರೆದುಕೊಳ್ಳುತ್ತದೆ. 3.9 ಇಂಚಿನ ಸಣ್ಣ ಸ್ಕ್ರೀನ್ ಮೇಲೆ 6.8 ಇಂಚಿನ ದೊಡ್ಡ ಡಿಸ್ಪ್ಲೆ ಅಳವಡಿಸಲ್ಪಟ್ಟಿರುತ್ತದೆ. ವಾಸ್ತವದಲ್ಲಿ ಎಲ್.ಜಿ ಡುಯಲ್ ಸ್ಕ್ರೀನ್ 5ಜಿ ಸಂಪರ್ಕಕ್ಕೆ ಸೂಕ್ತವಾಗುವ ಪ್ರೊಸೆಸರ್ ಹೊಂದಿದೆ. ಆದರೆ ಭಾರತದಲ್ಲಿ 5ಜಿ ಸಂಪರ್ಕವಿರದ ಕಾರಣ ಎಲ್.ಜಿ ವಿಂಗ್ ಫಾರ್ ಇಂಡಿಯಾದಲ್ಲಿ 4 ಜಿ ಸಂಪರ್ಕಕ್ಕೆ ಸೂಕ್ತವಾಗುವ ಭಿನ್ನ ಪ್ರೊಸೆಸರನ್ನು ಅಳವಡಿಸಲಾಗಿದೆ.



Join Whatsapp