ರಾಮಮಂದಿರಕ್ಕೆ ದೇಣಿಗೆ ನಿರಾಕರಣೆ| ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಿದ ಶಾಲಾಡಳಿತ!

Prasthutha|

►15 ಸಾವಿರ ರೂ. ದೇಣಿಗೆಗೆ ಬಲವಂತ!

- Advertisement -

ಹೊಸದಿಲ್ಲಿ: ಅಯೋಧ್ಯೆಯ ರಾಮ ಮಂದಿರಕ್ಕೆ ದೇಣಿಗೆ ನೀಡಲು ನಿರಾಕರಿಸಿದ ಮುಖ್ಯೋಪಾಧ್ಯಾಯಿನಿಯೊಬ್ಬರನ್ನು ಶಾಲಾಡಳಿತ ಮಂಡಳಿ ಅಮಾನತುಗೊಳಿಸಿದ ಘಟನೆ ನಡೆದಿದೆ.

ಶಿಕ್ಷಕಿಯ ದೂರಿನ ಮೇರೆಗೆ ದೆಹಲಿ ಹೈಕೋರ್ಟ್ ಶಾಲಾಡಳಿತ ಮಂಡಳಿಗೆ ನೋಟಿಸ್ ಕಳುಹಿಸಿದೆ.
ರಾಮ ಮಂದಿರಕ್ಕೆ 70,000 ರೂ.ನಿಂದ 1 ಲಕ್ಷದವರೆಗೆ ದೇಣಿಗೆ ಸಂಗ್ರಹಿಸಿ ಕೊಡಲು ಒತ್ತಡ ಹೇರಲಾಗಿತ್ತು ಎಂದು ಶಿಕ್ಷಕಿ ದೂರು ನೀಡಿದ್ದರು.

- Advertisement -

ಜತೆಗೆ ಶಿಕ್ಷಕರಿಂದಲೇ 15 ಸಾವಿರ ರೂಪಾಯಿ ಸಂಗ್ರಹಿಸಲು ಶಾಲಾಡಳಿತ ಮಂಡಳಿ ನಿರ್ಧರಿಸಿತ್ತು. ಆದರೆ, ಮುಖ್ಯಶಿಕ್ಷಕಿಗೆ 15 ಸಾವಿರ ರೂ. ನೀಡಲು ಸಾಧ್ಯವಾಗಲಿಲ್ಲ. 2016ರಲ್ಲಿ ಪತಿಗೆ ಅಪಘಾತವಾದಾಗಿನಿಂದ ಶಿಕ್ಷಕಿ ತೀವ್ರ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಶಾಲಾಡಳಿತ ಮಂಡಳಿಯಲ್ಲದೆ ಆರೆಸ್ಸೆಸ್ ನ ಟ್ರಸ್ಟ್ ಸಮರ್ಥ್ ಶಿಕ್ಷಾ ಸಮಿತಿ ಮತ್ತು ದೆಹಲಿ ಸರ್ಕಾರದ ಶಿಕ್ಷಣ ನಿರ್ದೇಶನಾಲಯಕ್ಕೂ ನ್ಯಾಯಮೂರ್ತಿ ಕಾಮೇಶ್ವರ್ ರಾವ್ ನೋಟಿಸ್ ಜಾರಿ ಮಾಡಿದ್ದಾರೆ. ಫೆಬ್ರವರಿಯಲ್ಲಿ, ಆರ್‌ಎಸ್‌ಎಸ್‌ನ ಸಮಿತಿಯು ದೇವಾಲಯದ ನಿರ್ಮಾಣಕ್ಕಾಗಿ ಈ ವರ್ಷ 70,000 ಶಾಲೆಗಳಿಗೆ ನಿರ್ದೇಶನ ನೀಡಿತ್ತು.



Join Whatsapp