ಅಪ್ಪನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಧೃತಿ: ದುಃಖ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅತ್ತ ಪುತ್ರಿ

Prasthutha|

ಬೆಂಗಳೂರು: ನಿನ್ನೆ ನಿಧನರಾದ ಪುನೀತ್ ರಾಜ್ ಕುಮಾರ್ ಅವರ ಪುತ್ರಿ ಧೃತಿ ನ್ಯೂಯಾರ್ಕ್ ನಿಂದ ಆಗಮಿಸಿ ಅಪ್ಪನ ಅಂತಿಮ ದರ್ಶನ ಪಡೆದರು. ಅಪ್ಪನ ಪಾರ್ಥಿವ ಶರೀರವನ್ನು ನೋಡಿ ದುಃಖ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ನ್ಯೂಯಾರ್ಕ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಧೃತಿಗೆ ತಂದೆ ಪುನೀತ್ ರಾಜ್ ಕುಮಾರ್ ಮೃತಪಟ್ಟಿರುವ ವಿಚಾರ ನಿಜಕ್ಕೂ ಶಾಕಿಂಗ್ ಆಗಿದೆ.

- Advertisement -


ಧೃತಿ ಅವರು ಇಂದು ಮಧ್ಯಾಹ್ನ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಮಧ್ಯಾಹ್ನ 1.30ಕ್ಕೆ ಬೆಂಗಳೂರು ವಿಮಾನ ಏರಿದ್ದ ಅವರು ಸಂಜೆ 4 ಗಂಟೆ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಏರ್ ಪೋರ್ಟ್ನಿಂದ ನೇರವಾಗಿ ಕಂಠೀರವ ಸ್ಟೇಡಿಯಂಗೆ ಆಗಮಿಸಿ ಅವರು, ಅಪ್ಪನ ತಲೆ ಸವರಿ ಕಣ್ಣೀರು ಹಾಕಿದ್ದಾರೆ. ಈ ದೃಶ್ಯವನ್ನು ನೋಡುತ್ತಿದ್ದವ ಕಣ್ಣಂಚಿನಲ್ಲಿ ನೀರು ಹರಿಯುತ್ತಿರುವ ದೃಶ್ಯ ಕಂಡುಬಂತು. ಈ ವೇಳೆ ದೊಡ್ಡಪ್ಪ ಶಿವರಾಜ್ ಕುಮಾರ್ ಅವರು ಧೃತಿಯನ್ನು ಸಂತೈಸುವ ಪ್ರಯತ್ನ ಮಾಡಿದರು.



Join Whatsapp