ಕಳೆದ 25 ವರ್ಷಗಳಲ್ಲಿ ಮತಾಂತರ ಗೊಂಡವರ ವಿವರ ಕೇಳಿದ ರಾಜ್ಯ ಸರ್ಕಾರ

Prasthutha|

ಬೆಂಗಳೂರು: ಕಳೆದ 25 ವರ್ಷಗಳ ಅವಧಿಯಲ್ಲಿ ಮತಾಂತರಗೊಂಡವರ ಮಾಹಿತಿಯನ್ನು ಮೂವತ್ತು ದಿನಗಳ ಒಳಗೆ ಸರಕಾರಕ್ಕೆ ಸಲ್ಲಿಸಬೇಕು ಎಂದು ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಮಿತಿಯು ವಿವಿಧ ಇಲಾಖೆಗಳಿಗೆ ಸೂಚನೆ ನೀಡಿ ಆದೇಶಿಸಿದೆ.

- Advertisement -

ರಾಜ್ಯದ ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಪಂಚಾಯತ್ ನ ಕಾರ್ಯನಿರ್ವಹಣಾಧಿಕಾರಿಗಳಿಂದ ಮಾಹಿತಿ ಪಡೆದು ವರದಿಯನ್ನು ಸಮಿತಿಗೆ ನೀಡುವಂತೆ ತಿಳಿಸಿದೆ. 2016 ರಿಂದ 2021ರ ಅವಧಿಯಲ್ಲಿ ಒಟ್ಟು 36 ಪ್ರಕರಣಗಳ ಪ್ರಗತಿ ಮತ್ತು ಶಿಕ್ಷೆ ಪ್ರಕಟಗೊಂಡಿರುವ ಮಾಹಿತಿಯನ್ನು ನೀಡಬೇಕು ಎಂದಿದೆ. ಅಲ್ಲದೇ 2019ರಲ್ಲಿ ಹೈಕೋರ್ಟ್ ಉಡುಪಿಯಲ್ಲಿ ನಡೆದ ಮತಾಂತರಕ್ಕೆ ಸಂಬಂಧಿಸಿ ನೀಡಿದ ತೀರ್ಪಿನ ಕುರಿತಾಗಿಯೂ ಮಾಹಿತಿ ಕಲೆಹಾಕುವಂತೆ ಸೂಚಿಸಿದೆ.

ಗೃಹ ಇಲಾಖೆಯೊಂದಿಗಿರುವ ಬಲವಂತ ಮತಾಂತರದ ಕುರಿತು ಎಫ್ ಐ ಆರ್ ದಾಖಲಾಗಿ ಕ್ರಮಕೈಗೊಂಡಿರುವ ಮಾಹಿತಿಯನ್ನು ನೀಡುವಂತೆ ಕೋರಿದೆ. ಮತ್ತು ಚಿತ್ರದುರ್ಗದಲ್ಲಿನ ಬ್ಯಾಪ್ಟಿಸ್ಟ್ ಚರ್ಚಿನ ವಿವಾದದ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದು ಮೂವತ್ತು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಕಲ್ಯಾಣ ಸಮಿತಿಯು ಇಲಾಖೆಗಳಿಗೆ ಸೂಚನೆ ನೀಡಿದೆ.



Join Whatsapp