ಅಜೀಂ ಪ್ರೇಮ್ ಜಿ ಭಾರತದ ಅತ್ಯಂತ ‘ಉದಾರಿ’ ಉದ್ಯಮಿ!

Prasthutha|

ಪ್ರತಿದಿನ 27 ಕೋಟಿ ರೂ. ದಾನ!

- Advertisement -


ಮುಂಬೈ: ವಿಪ್ರೋ ಕಂಪನಿ ಸಂಸ್ಥಾಪಕರಾದ ಉದ್ಯಮಿ ಅಜಿಂ ಪ್ರೇಂ ಜಿ 2021ರ ಆರ್ಥಿಕ ವರ್ಷದಲ್ಲಿ ದೇಶದ ಅತ್ಯಂತ ಉದಾರಿ ಉದ್ಯಮಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದು, ದಿನವೊಂದಕ್ಕೆ 27 ಕೋಟಿ ರೂ. ದಾನ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಅಜಿಂ ಪ್ರೇಂ ಜಿ ಈ ವರ್ಷ 9,713 ಕೋಟಿ ದಾನ ಮಾಡಿದ್ದಾರೆ ಎಡೆಲ್ಗೈವ್ ಮತ್ತು ಹುರಾನ್ ಫೌಂಡೇಷನ್ ವರದಿ ಮಾಡಿದೆ.

1,263 ಕೋಟಿ ದಾನ ಮಾಡಿದ HCL ನ ಶಿವ ನಡಾರ್ ಕಂಪನಿ ಎರಡನೇ ಸ್ಥಾನದಲ್ಲಿದೆ. 577 ಕೋಟಿ ದಾನ ಮಾಡಿದ ದೇಶದ ನಂಬರ್ 1ನೇ ಅತ್ಯಂತ ಶ್ರೀಮಂತ ಮುಖೇಖ್ ಅಂಬಾನಿ ಮೂರನೇ ಸ್ಥಾನದಲ್ಲಿದ್ದರೆ, ಕುಮಾರ್ ಮಂಗಳಂ ಬಿರ್ಲಾ 377 ಕೋಟಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. 183 ಕೋಟಿ ದಾನ ಮಾಡಿದ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಐದನೇ ಸ್ಥಾನದಲ್ಲಿದ್ದಾರೆ.
ವಿಪತ್ತು ನಿರ್ವಹಣೆಗಾಗಿ 130 ಕೋಟಿ ದೇಣಿಗೆ ನೀಡಿದ ದೇಶದ ಎರಡನೇ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಎಂಟನೇ ಸ್ಥಾನದಲ್ಲಿದ್ದಾರೆ. ಹಿಂದುಜಾ ಪ್ಯಾಮಿಲಾ, ಬಜಾಬ್ ಪ್ಯಾಮಿಲಿ, ಅನಿಲ್ ಅಗರ್ ವಾಲ್ ಮತ್ತು ಬುರ್ಮನ್ ಪ್ಯಾಮಿಲಿ ಟಾಪ್ 10ರ ಸ್ಥಾನದಲ್ಲಿದ್ದಾರೆ.



Join Whatsapp