ಮುಸ್ಲಿಮರಿಗೆ ಅವಮಾನಿಸಿದ ಕಾಫಿ ಶಾಪ್ ನಲ್ಲಿ ನಮಾಝ್ ನಿರ್ವಹಿಸುವ ವೀಡಿಯೊದ ಅಸಲಿಯತ್ತೇನು?

Prasthutha|

ಅಮೆರಿಕದ ಮಾಜಿ ವೃತ್ತಿಪರ ಬಾಕ್ಸರ್ ಮೈಕ್ ಟೈಸನ್ ಇಸ್ಲಾಮಿಕ್ ಪ್ರಾರ್ಥನೆ ಸಲ್ಲಿಸುತ್ತಿರುವ ವೀಡಿಯೊವೊಂದು ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ವ್ಯಾಪಕ ವೈರಲ್ ಆಗಿದೆ.

- Advertisement -

“ಸೆಂಟ್ರಲ್ ಲಾಸ್ ಏಂಜಲೀಸ್ ನ ಕಾಫಿ ಶಾಪ್ ಮಾಲಕನೊಬ್ಬ ತನ್ನ ಕಾಫಿ ಶಾಪ್ ನಲ್ಲಿ ‘’ನಾಯಿಗಳಿಗೆ ಮತ್ತು ಮುಸ್ಲಿಮರಿಗೆ ಪ್ರವೇಶವಿಲ್ಲ’’ ಎಂಬ ಬೋರ್ಡ್ ಹಾಕಿದ್ದ. ಹೀಗಾಗಿ ಅಲ್ಲಿಗೆ ಜಗತ್ತಿನ ಮೂವರು ಬಾಕ್ಸಿಂಗ್ ಚಾಂಪಿಯನ್ ಗಳಾದ ಮಾಜಿ ವಿಶ್ವ ಚಾಂಪಿಯನ್ ಮೈಕ್ ಟೈಸನ್, ಹಾಲಿ ವಿಶ್ವ ಚಾಂಪಿಯನ್ ಬಡೊ ಜಾಕ್ ಮತ್ತು ಹಾಲಿ ಕಿಕ್ ಬಾಕ್ಸಿಂಗ್ ಚಾಂಪಿಯನ್ ಪೆಲೆಸ್ತೀನಿಯನ್ ಆಮಿರ್ ಅಬ್ದಲ್ಲಾ ಬಂದರು… ಕಾಫಿ ಶಾಪಿ ಮಾಲಕ ಮತ್ತು ಸಿಬ್ಬಂದಿ ಮುಜುಗರದಿಂದ ನೋಡುತ್ತಿದ್ದಂತೆ, ಅವರು ಅಲ್ಲಿಯೇ ಶಾಪ್ ನ ಮಧ್ಯೆ ಪ್ರಾರ್ಥನೆ ಸಲ್ಲಿಸದರು. ಅಲ್ಲಿ ಮಾಲಕ ನಿಂತುಕೊಂಡಿದ್ದಾನೆ…’’ ಎಂಬ ಬರಹದೊಂದಿಗೆ ವೀಡಿಯೊ ಪೋಸ್ಟ್ ಮಾಡಲಾಗಿತ್ತು. ಅದೇ ವೀಡಿಯೊ ಹಾಗೂ ಬರಹವನ್ನು ಹಾಗೆಯೇ ನೂರಾರು ಜನರು ಶೇರ್ ಮಾಡಿದ್ದರು.

ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಇದು ವೈರಲ್ ಆಗುತ್ತಿದ್ದಂತೆ, ಇದರ ಸತ್ಯಾಸತ್ಯತೆ ಕುರಿತು ಪರಿಶೀಲಿಸಲು ಮನವಿಗಳು ಬಂದ್‌ ಹಿನ್ನೆಲೆಯಲ್ಲಿ ‘ಆಲ್ಟ್ ನ್ಯೂಸ್’ ಈ ಕುರಿತು ಪರಿಶೀಲನೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಿದೆ.

- Advertisement -

ಮೂವರ ಟ್ವಿಟರ್ ಖಾತೆಗಳನ್ನು ಪರಿಶೀಲಿಸಿದಾಗ ಜಾಕ್ ಅವರ ಟ್ವೀಟ್ ನಲ್ಲಿ ಈ ವಿಷಯ ಪತ್ತೆಯಾಗಿದೆ. ನನ್ನ ಸಹೋದರರೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿರುವುದು ಎಂದು ಜಾಕ್ ಟ್ವೀಟ್ ಮಾಡಿ, ಅದರಲ್ಲಿ ಮೈಕ್ ಟೈಸನ್ ಮತ್ತು ಟೀಮ್ ಅಬ್ದಲ್ಲಾ ಅವರನ್ನು ಉಲ್ಲೇಖಿಸಲಾಗಿತ್ತು. ಜಾಕ್ ಮತ್ತು ಅಬ್ದಲ್ಲಾ ಅವರ ಹೆಸರನ್ನು ತಪ್ಪಾಗಿ ವೈರಲ್ ಟ್ವೀಟ್ ನಲ್ಲಿ ಬಳಸಿಕೊಳ್ಳಲಾಗಿದೆ.

ವೀಡಿಯೊದಲ್ಲಿ ಜಾಕ್ ಮತ್ತು ಟೈಸನ್ ಹಿಂದಿರುವ ಗೋಡೆಯಲ್ಲಿ ಲೋಗೊ ಒಂದು ಕಾಣಿಸುತ್ತಿದೆ. ಅದು ಟೈಸನ್ & ರಾಂಚ್ ಎಂಬುದರ ಅರ್ಥದಲ್ಲಿ ‘ಟಿಆರ್’ ಎಂದು ಬರೆದಿದೆ. ಇದು ಮೈಕ್ ಟೈಸನ್ ಮಾಲಕತ್ವದ ಕಂಪೆನಿಯ ಲೋಗೊ ಆಗಿದೆ. ಮಾಧಕ ವಸ್ತುಗಳಿಗೆ ಸಂಬಂಧಿಸಿ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪೆನಿ ಇದಾಗಿದೆ. ಟೈಸನ್ ಸ್ವತಃ ಸೆ.4ರಂದು ಇದೇ ಲೋಗೋ ಇರುವ ಫೋಟೊವೊಂದನ್ನು ಟ್ವೀಟ್ ಮಾಡಿದ್ದಾರೆ.

ಟಿಆರ್ ಒಳಗೆ ಮೂವರು ಪ್ರಾರ್ಥನೆ ಮಾಡುತ್ತಿರುವ ವೀಡಿಯೊ ‘ದ ಮೇವೆದರ್’ ಚಾನೆಲ್ ಪ್ರಸಾರ ಮಾಡಿತ್ತು. ಹೀಗಾಗಿ ಈ ವೀಡಿಯೊ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಸಂಗತಿ ಸುಳ್ಳು ಎಂಬುದು ಸಾಬೀತಾಗಿದೆ.



Join Whatsapp