ಮಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ಹೆಸರಲ್ಲಿ ಎರಡು ಸಾವಿರ ರೂಪಾಯಿ ಖೋಟಾ ನೋಟು ಚಲಾವಣೆ ಆಗಿದೆ ಎಂದು ಸುಳ್ಳು ಸುದ್ದಿ ರವಾನೆಯಾಗಿದೆ.
ನೋಟಿನಲ್ಲಿ 2 ಎಕ್ಯೂ ಬಿಎಸಿ ಸಂಖ್ಯೆ ನೋಟು ಎಂದು ಸುಳ್ಳು ಸುದ್ದಿ ಪ್ರಕಟವಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಮಂಗಳೂರು ಸ್ಟೇಟ್ ಬ್ಯಾಂಕ್ ಅಧಿಕಾರಿ, 2006 ರಲ್ಲಿ ಈ ರೀತಿಯ ಒಂದು ಸಾವಿರ ರೂಪಾಯಿ ನೋಟಿ ಬಂದಿದೆ ಎಂದು ಸುದ್ದಿ ಆಗಿತ್ತು.
ಬಳಿಕ 2017 ರಲ್ಲಿಯೂ ಈ ರೀತಿಯ ಸುಳ್ಳು ಸುದ್ದಿ ರವಾನೆ ಆಗಿತ್ತು. ಆದರೆ ಇದೀಗ ಮತ್ತೆ ಎರಡು ಸಾವಿರ ರೂಪಾಯಿ ನೋಟಿನ ಸಿರಿಯಲ್ ನಂಬರ್ ಹಾಕಿ ಸುಳ್ಳು ಸುದ್ದಿ ರವಾನೆ ಮಾಡಲಾಗಿದೆ. ಇಂತಹ ಸುದ್ದಿಗಳಿಗೆ ಯಾರು ಕಿವಿಕೊಡಬೇಡಿ ಎಂದು ಮಾಹಿತಿ ನೀಡಿದ್ದಾರೆ.