ಖೇಲ್‌ ರತ್ನದ ಹೆಸರನ್ನು ಬದಲಾಯಿಸಲು ಕಾರಣ ಪ್ರಧಾನಿಯ ಟ್ವೀಟ್‌, ಜನರ ಆಗ್ರಹವಲ್ಲ ಎಂದ ವರದಿ

Prasthutha|

ಹೊಸದಿಲ್ಲಿ : ಆಗಸ್ಟ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ದೇಶಾದ್ಯಂತ ನಾಗರಿಕರಿಂದ ಬಹಳಷ್ಟು ಮನವಿಗಳು ಬಂದಿರುವ ಕಾರಣ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಪ್ರಧಾನ ಮಂತ್ರಿಯವರ ಟ್ವೀಟಲ್ಲಿರುವ ‘ಸಾರ್ವಜನಿಕ ಒತ್ತಾಯ’ ವು ಸುಳ್ಳಾಗಿದೆ ಎಂದು ವರದಿಯೊಂದು ತಿಳಿಸಿದೆ.

- Advertisement -

ಈ ಪ್ರಶಸ್ತಿಗೆ ಮರುನಾಮಕರಣ ಮಾಡಲು ಎಷ್ಟು ಮನವಿಗಳು ಬಂದಿವೆ ಎಂಬ ಕುರಿತು ‘ದಿ ವೈರ್’ ಮಾಧ್ಯಮವು ಆರ್ಬಿಐ ಅರ್ಜಿ ಸಲ್ಲಿಸಿತ್ತು. ಅದಕ್ಕೆ ಉತ್ತರವಾಗಿ ಅಂತಹ ಯಾವುದೇ ಮಾಹಿತಿ ಇಲ್ಲವೆಂದು ಅಧಿಕಾರಿಗಳು ಉತ್ತರಿಸಿದ್ದಾಗಿ thewire.in ವರದಿ ಮಾಡಿದೆ.
ಆದರೆ ಈ ಪ್ರಶಸ್ತಿಗೆ ಮರುನಾಮಕರಣಗೊಳಿಸಲು ಕ್ರೀಡಾ ಸಚಿವಾಲಯವು ಪ್ರಧಾನಿಯ ಟ್ವೀಟ್ ಬಳಿಕವೇ ನಿರ್ಧರಿಸಿತ್ತೆಂಬ ಅಂಶ ಈಗ ಬಯಲಾಗಿದೆ.



Join Whatsapp