ಧಾರವಾಡ: ಕ್ಷುಲ್ಲಕ ಕಾರಣಕ್ಕೆ ತನ್ನ ತಂಗಿಯನ್ನೇ ಅಣ್ಣನೊಬ್ಬ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಅಮಾನವೀಯ ಘಟನೆ ಧಾರವಾಡದ ನವಲಗುಂದ ಪಟ್ಟಣದ ಕಲ್ಮೇಶ್ವರ ಗುಡಿ ಬಳಿಯಲ್ಲಿ ನಡೆದಿದೆ.
ಅಣ್ಣನಿಂದಲೇ ಕೊಲೆಗೀಡಾದ ಯುವತಿ ಶಶಿಕಲಾ ಸುಣಗಾರ ನವಲಗುಂದ ಪಟ್ಟಣದ ಕಲ್ಮೇಶ್ವರ ಗುಡಿಯ ಬಳಿಯಲ್ಲಿರುವ ತನ್ನ ತವರು ಮನೆಗೆ ಆಗಮಿಸಿದ್ದು, ಅಣ್ಣ ಮಹಾಂತೇಶ್ ಜೊತೆಗೆ ಜಗಳವಾಗಿದೆ ಎನ್ನಲಾಗಿದೆ.
ಹೀಗೆ ಜಗಳ ತಾರಕಕ್ಕೇರಿ ಅಣ್ಣ ಮಹಾಂತೇಶ ಶರಣಪ್ಪ ತಂಗಿ ಶಶಿಕಲಾ ಸುಣಗಾರ ಕಣ್ಣಿಗೆ ಖಾರದಪುಡಿ ಎರಚಿ ಹರಿತವಾದ ಆಯುಧದಿಂದ ಸಾಯಿಸಿದ್ದಾನೆ. ರಕ್ತದ ಮಡುವಿನಲ್ಲಿ ತಂಗಿ ಒದ್ದಾಡಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಹೀಗೆ ಹತ್ಯೆ ನಡೆಸಿದ ಬಳಿಕ ಮಹಾಂತೇಶ ಸ್ಥಳದಿಂದ ಪರಾರಿಯಾಗಿದ್ದಾನೆ. ಸಂಬಂಧ ನವಲಗುಂದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.