ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸಿದರಷ್ಟೇ ಕಾಶ್ಮೀರದಲ್ಲಿ ಶಾಂತಿ ನೆಲೆಗೊಳ್ಳಲು ಸಾಧ್ಯ : ಫಾರೂಕ್ ಅಬ್ದುಲ್ಲಾ

Prasthutha|

ಕಾಶ್ಮೀರ: ಕಾಶ್ಮೀರದಲ್ಲಿ ಶಾಂತಿ ನೆಲೆಗೊಳ್ಳಬೇಕಾದರೆ ಪಾಕಿಸ್ತಾನದ ಜತೆ ಮಾತುಕತೆ ನಡೆಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಡಾ.ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಪಾಕಿಸ್ತಾನದೊಂದಿಗೆ ಮಾತುಕತೆ ಇಲ್ಲದೇ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಅಸಾಧ್ಯ. ಸೆಕ್ಷನ್ 370 ಮತ್ತು 35 ಎ ರದ್ದಾದ ನಂತರ, ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳು ಹೆಚ್ಚಾಗಿದ್ದು, ಈಗ ಅದನ್ನು ನಿರ್ಮೂಲನೆ ಮಾಡುವುದು ಕಷ್ಟವಾಗಿದೆ ಎಂದರು.

- Advertisement -

ನೀವು ಈಗಾಗಲೇ ಮಾಡಬೇಕಾದಷ್ಟು ಯುದ್ಧಗಳನ್ನು ಮಾಡಿದ್ದೀರಿ. ಈಗ ಮತ್ತೊಂದು ಯುದ್ಧ ನಡೆದರೆ ಅದು ತುಂಬಾ ಅಪಾಯಕಾರಿ. ಎರಡೂ ರಾಷ್ಟ್ರಗಳು ಪರಮಾಣು ಬಾಂಬುಗಳನ್ನು ಹೊಂದಿವೆ. ಆದರೆ ನಾವಿಲ್ಲಿ ಸಾಯುತ್ತಿದ್ದೇವೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಹಾಗೂ ಸಂಸದ ಡಾ.ಫಾರೂಕ್ ಅಬ್ದುಲ್ಲಾ ಹರಿಹಾಯ್ದಿದ್ದಾರೆ.
ನನ್ನನ್ನೂ ಕೊಂದರೂ ಕಾಶ್ಮೀರ ಭಾರತದಲ್ಲಿರುತ್ತದೆಯೇ ಹೊರತು ಎಂದಿಗೂ ಪಾಕಿಸ್ತಾನ ಸೇರುವುದಿಲ್ಲ ಎಂದು ಕೆಲವು ದಿನಗಳ ಹಿಂದಷ್ಟೇ ಫಾರೂಕ್ ಅಬ್ದುಲ್ಲಾ ಹೇಳಿದ್ದರು.

ಅಕ್ಟೋಬರ್ 7 ರಂದು ಗುರುದ್ವಾರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಈದ್ಗಾದಲ್ಲಿರುವ ಸರ್ಕಾರಿ ಶಾಲೆಯ ಪ್ರಾಂಶುಪಾಲ ಸುಪಿಂದರ್ ಕೌರ್ ಅವರ ಸಂತಾಪ ಸಭೆಯಲ್ಲಿ ಮಾತನಾಡಿದ ಅಬ್ದುಲ್ಲಾ, ಕಾಶ್ಮೀರದ ಜನರು ಧೈರ್ಯದಿಂದ ಇರಬೇಕು ಮತ್ತು ಒಗ್ಗಟ್ಟಾಗಿ ಕೊಲೆಗಾರರ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ನಾವು ಈ ಮೃಗಗಳ ವಿರುದ್ಧ ಹೋರಾಡಬೇಕು, ಏನೇ ಬಂದರೂ ನಾವು ಭಾರತದ ಭಾಗವಾಗಿರಬೇಕು, ಅವರು ನನ್ನನ್ನು ಶೂಟ್ ಮಾಡಿ ಕೊಂದರೂ ಈ ನಿರ್ಧಾರ ಬದಲಾಗಬಾರದು ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

- Advertisement -

ಕೌರ್ ಹತ್ಯೆಗೆ ದುಃಖ ವ್ಯಕ್ತಪಡಿಸಿದ ಅವರು 1990ರಲ್ಲಿ ಭಯದಿಂದ ಎಲ್ಲರಬ ಕಣಿವೆ ರಾಜ್ಯವನ್ನು ತೊರೆದರು ಆದರೆ ಸಿಖ್ ಸಮುದಾಯ ಮಾತ್ರ ಕಾಶ್ಮೀರ ತೊರೆಯಲಿಲ್ಲ, ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ, ಏನೇ ಬಂದರು ನಾವು ನಿಮ್ಮ ಜೊತೆಗಿರುತ್ತೇವೆ ಎಂದು ವಿಶ್ವಾಸ ಹೇಳಿದರು. ಐಸಿಸಿ ಟಿ-20 ವಿಶ್ವಕಪ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾರತ ಸೋಲು ಕಾಣುತ್ತಿದ್ದಂತೆ ಕೋಟ್ಯಂತರ ಅಭಿಮಾನಿಗಳು ನಿರಾಸೆಗೊಳಗಾಗಿದ್ದಾರೆ. ಅದಾಗ್ಯೂ ಜಮ್ಮು-ಕಾಶ್ಮೀರದ ಕೆಲವೊಂದು ಪ್ರದೇಶಗಳಲ್ಲಿ ಪಾಕ್ ಗೆಲುವಿನ ಸಂಭ್ರಮ ಮಾಡಲಾಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.



Join Whatsapp