ಇಂದಿನಿಂದ 1-5ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿ ಆರಂಭ

Prasthutha|

ಬೆಂಗಳೂರು: 1-5ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಇಂದಿನಿಂದ ಆರಂಭವಾಗಲಿದೆ. ಕೋವಿಡ್ ಕಾರಣದಿಂದ ಕಳೆದ ಒಂದೂವರೆ ವರ್ಷಗಳಿಂದ ಬಾಕಿಯಾಗಿದ್ದ ಭೌತಿಕ ತರಗತಿ ಇಂದಿನಿಂದ ಪ್ರಾರಂಭಗೊಳ್ಳಲಿದೆ.

- Advertisement -

ಎಲ್ಲಾ ಸುರಕ್ಷ ಕ್ರಮಗಳನ್ನು ಪಾಲಿಸಿಕೊಂಡು ತರಗತಿಗಳನ್ನು ನಡೆಸುವಂತೆ ಶಿಕ್ಷಕರಿಗೆ ಮತ್ತು ಶಾಲಾ ಆಡಳಿತ ಮಂಡಳಿಗೆ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಮಕ್ಕಳು ಕೋವಿಡ್‌ ಸುರಕ್ಷಾಕ್ರಮಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೇ ತರಗತಿ ಅವಧಿಯಲ್ಲಿ ಮಕ್ಕಳಿಗೆ ಕೋವಿಡ್ ಕುರಿತು ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಭೌತಿಕ ತರಗತಿಗೆ ಹಾಜರಾಗುವುದು ಖಡ್ಡಾಯವಲ್ಲ, ಹಾಜರಾಗುವವರು ಪಾಲಕರಿಂದ ಅನುಮತಿ ಪತ್ರ ಪಡೆಯುವುದು ಖಡ್ಡಾಯವಾಗಿದೆ. ಎರಡು ಡೋಸ್‌ ಲಸಿಕೆ ಪೂರ್ಣಗೊಂಡ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಮಾತ್ರ ಶಾಲೆಗೆ ಬರಬೇಕು. ಸಾಮಾಜಿಕ ಅಂತರ, ಮಾಸ್ಕ್, ವಿದ್ಯಾರ್ಥಿಗಳ ಉಷ್ಣಾಂಶ ಪರೀಕ್ಷೆ ಇತ್ಯಾದಿ ನಿತ್ಯವೂ ಮಾಡಬೇಕು. ಶೌಚಾಲಯ ಹಾಗೂ ತರಗತಿ ಕೊಠಡಿಯನ್ನು ಸ್ವಚ್ಚಗೊಳಿಸಬೇಕು. ಮತ್ತು ಶೇ.50ರಷ್ಟು ಮಕ್ಕಳಿಗೆ ಮಾತ್ರ ಭೌತಿಕ ತರಗತಿಗಳಿಗೆ ಅವಕಾಶ ನೀಡಬೇಕು ಎಂದು ಶಿಕ್ಷಣ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.



Join Whatsapp