ಆಂಧ್ರದಲ್ಲಿ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಪೋಸ್ಟ್: 6 ಮಂದಿಯನ್ನು ಬಂಧಿಸಿದ ಕೇಂದ್ರ ತನಿಖಾ ತಂಡ

Prasthutha|

ಅಮರಾವತಿ: ನ್ಯಾಯಾಧೀಶರು ಮತ್ತು ನ್ಯಾಯಾಂಗದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಘೋಷಿಸಿದೆ.

- Advertisement -

ಶ್ರೀಧರ್ ರೆಡ್ಡಿ ಅವುತು, ಜಲಗಂ ವೆಂಕಟ್ ಸತ್ಯನಾರಾಯಣ, ಗುಡಾ ಶ್ರೀಧರ್ ರೆಡ್ಡಿ, ಶ್ರೀನಾಥ್ ಸುಸ್ವರಂ, ಕಿಶೋರ್ ಕುಮಾರ್ ದರಿಸಾ ಅಲಿಯಾಸ್ ಕಿಶೋರ್ ರೆಡ್ಡಿ ದರಿಸಾ ಮತ್ತು ಸುದ್ದುಲೂರಿ ಅಜಯ್ ಅಮೃತ್ ಬಂಧಿತರು

ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಕೇಂದ್ರ ಸಂಸ್ಥೆ ತಿಳಿಸಿದೆ.

- Advertisement -

ಆಂಧ್ರಪ್ರದೇಶ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐ ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆಸಿತ್ತು.

ಈ ಬಂಧನದೊಂದಿಗೆ ಒಟ್ಟು ಬಂಧಿತರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ. ಆಂಧ್ರ ಹೈಕೋರ್ಟ್ ನ ಆದೇಶದ ಮೇರೆಗೆ 12 ಎಫ್.ಐ.ಆರ್ ಗಳ ತನಿಖೆಯನ್ನು ಆಂಧ್ರಪ್ರದೇಶದ ಸಿಐಡಿ ನಡೆಸಿದೆ.

ಐಪಿಸಿ ಸೆಕ್ಷನ್ 153 (ಎ), 504, 505 (2) ಮತ್ತು 506 ಮತ್ತು ಐಟಿ ಆಕ್ಟ್ 2000 ರ ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.



Join Whatsapp