ಕೊರೋನದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ “ಚಿಣ್ಣರ ಧಾಮ” ನಿರ್ಮಿಸುತ್ತಿರುವ ಬೆಂಗಳೂರು ವಿಮಾನ ನಿಲ್ದಾಣ ಫೌಂಡೇಷನ್ !

Prasthutha|

ಬೆಂಗಳೂರು: ಕೋವಿಡ್ ಸಾಂಕ್ರಮಿಕದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಆರೈಕೆಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಫೇರ್ ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಹಾಗೂ ಸ್ಪರ್ಶಾ ಟ್ರಸ್ಟ್ ವತಿಯಿಂದ “ಚಿಣ್ಣರ ಧಾಮ” ನಿರ್ಮಾಣ ಮಾಡಲಾಗುತ್ತಿದೆ.

- Advertisement -


ಕಳೆದೆರಡು ವರ್ಷಗಳಿಂದ ಕೋವಿಡ್-19 ದಾಳಿಯಿಂದಾಗಿ ಲಕ್ಷಾಂತರ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲೂ ಇಬ್ಬರೂ ಪೋಷಕರು ಅಥವಾ ಒಬ್ಬ ಪೋಷಕರನ್ನು ಕಳೆದುಕೊಂಡ ಮಕ್ಕಳು ಸಂಕಷ್ಟದಲ್ಲಿದ್ದಾರೆ. ಅಂತಹ ಮಕ್ಕಳ ಭವಿಷ್ಯವೀಗ ಆತಂಕದಲ್ಲಿದ್ದು, ಹಣಕಾಸು ನೆರವು, ಮಾನಸಿಕ ಸ್ಥೈರ್ಯ ಈ ಮಕ್ಕಳಿಗೆ ಬೇಕಾಗಿದೆ.
ಈ ದೃಷ್ಟಿಯಿಂದ ರಾಜ್ಯ ವಿವಿಧ ಜಿಲ್ಲೆಗಳಿಂದ ಆಯ್ದ 300 ಹೆಣ್ಣುಮಕ್ಕಳಿಗೆ 12ನೇ ತರಗತಿವರೆಗೆ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ತರಬೇತಿಯನ್ನು ನೀಡಲು ‘ಚಿಣ್ಣರ ಧಾಮ’ ಎಂಬ ಸುಸಜ್ಜಿತ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಈ ಧಾಮದಲ್ಲಿ ವಸತಿ, ಕಲಿಕೆಗೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ.


ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ನ (ಬಿಐಎಎಲ್) ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ವಿಭಾಗವಾದ ಕೆಐಎಎಫ್ ಈ ಧಾಮ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ.
ಕೆಐಎಫ್ನ ಮಹತ್ವಾಕಾಂಕ್ಷಿ ಮತ್ತು ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾದ ‘ನಮ್ಮ ಶಿಕ್ಷಣ ‘ ಅಡಿಯಲ್ಲಿ ಚಿಣ್ಣರ ಧಾಮವನ್ನು ನಿರ್ವಹಿಸಲಾಗುತ್ತಿದೆ.

- Advertisement -


ಈ ಬಗ್ಗೆ ವಿವರಿಸಿರುವ ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ಅವರು, ” ಎಷ್ಟೋ ಮಕ್ಕಳ ಜೀವನ ಕೊರೊನಾ ಸಾಂಕ್ರಮಿಕದಿಂದ ಅತಂತ್ರವಾಗಿದೆ. ಅವರಿಗೆ ನೆರವಾಗುವ ದೃಷ್ಟಿಯಿಂದ ಚಿಣ್ಣರ ಧಾಮ ನಿರ್ಮಿಸುತ್ತಿದ್ದೇವೆ.


ಬೆಂಗಳೂರು ಏರ್ ಪೋರ್ಟ್ ಬಳಿಯ ಬೆಟ್ಟಕೋಟೆ ಎಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಎಕರೆ ಪ್ರದೇಶದಲ್ಲಿ ಚಿಣ್ಣರ ಧಾಮ ನಿರ್ಮಾಣಗೊಳ್ಳಲಿದೆ. ಇದರ ನಿರ್ವಹಣೆಯನ್ನು ಕಾರ್ಪೊರೇಟ್ ಅಧಿಕಾರಿಗಳು, ಮಾಜಿ ಸೇನಾಧಿಕಾರಿಗಳು, ಸಮಾಜಸೇವಕರ ತಂಡವೊಂದು ವಹಿಸಿಕೊಳ್ಳಲಿದೆ. 46,000 ಚ.ಅಡಿಗಳಲ್ಲಿ ನಿರ್ಮಾಣವಾಗುತ್ತಿರುವ ಈ ಧಾಮವು ಮೊದಲ ಹಂತದ ನಿರ್ಮಾಣ ಕಾಮಗಾರಿ 2021ರ ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳ್ಳುತ್ತಿದೆ. ಶಿಕ್ಷಣ ಕೇಂದ್ರ, ಆರೋಗ್ಯ ಸೇವೆಗಳು, ಕೌಶಲ ಅಭಿವೃದ್ಧಿ ತರಬೇತಿಗೆ ಅಗತ್ಯ ಮೂಲಸೌಕರ್ಯವನ್ನು ಈ ಧಾಮದಲ್ಲಿ ಒದಗಿಸಿಕೊಡಲಾಗುವುದು ಎಂದರು.


ಸ್ಟರ್ಶಾ ಟ್ರಸ್ಟ್ ನ ಆಡಳಿತ ಮಂಡಳಿ ಸದಸ್ಯರಾದ ಜಿ. ರಾಘವನ್ ಮಾತನಾಡಿ, ತಮ್ಮ ಮಕ್ಕಳ ಜೀವನವನ್ನು ಉಜ್ವಲವಾಗಿ ರೂಪಿಸಬೇಕು ಎಂದು ಕನಸು ಕಟ್ಟಿದ್ದ ಪೋಷಕರು ಕನಸನ್ನು ನನಸು ಮಾಡಲು ನಮ್ಮ ಸಂಸ್ಥೆ ನೆರವಾಗುತ್ತಿದೆ ಎಂದರು.



Join Whatsapp