ಮಂಗಳೂರಿನ ಭೂಗತ ತೈಲಾಗಾರದಿಂದ ಅರ್ಧದಷ್ಟು ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ

Prasthutha|

ನವದೆಹಲಿ: ಜಾಗತಿಕ ಕಚ್ಚಾ ತೈಲ ಬೆಲೆಯೇರಿಕೆಯಿಂದಾಗಿರುವ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ, ಮಂಗಳೂರಿನ ಭೂಗತ ತೈಲಾಗಾರದಿಂದ ಕಚ್ಚಾತೈಲವನ್ನು ಮಾರಾಟ ಮಾಡಲು ಮುಂದಾಗಿದೆ.

- Advertisement -

ಮಾತ್ರವಲ್ಲ ಖಾಸಗಿ ಮತ್ತು ಅಂತಾರಾಷ್ಟ್ರೀಯ ಕಂಪೆನಿಗಳಿಗೆ ಗುತ್ತಿಗೆ ನೀಡಲು ಅವಕಾಶವನ್ನು ನೀಡುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದೆ.

ತೈಲ ಮಾರುಕಟ್ಟೆ ಕಂಪೆನಿಗಳಿಗೆ ಮಾರಾಟ ಮಾಡುವುದರಿಂದ ತೈಲ ಸಂಗ್ರಹಕ್ಕೆ ಹೆಚ್ಚಿನ ಜಾಗವನ್ನು ಸೃಷ್ಟಿಸಲು ನೆರವು ಒದಗಿಸುತ್ತದೆ ಎಂದು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ನಿರ್ದೇಶಕರಾದ ಪಿ.ಎಸ್. ಅಹುಜಾ ತಿಳಿಸಿದರು.

- Advertisement -

ಈ ಸಂಬಂಧ ಮಂಗಳೂರಿನಲ್ಲಿ ಶೇಖರಿಸಿರುವ 0.3 ಮಿಲಿಯನ್ ಟನ್ ಗಳಷ್ಟು ಕಚ್ಚಾ ತೈಲವನ್ನು ಈಗಾಗಲೇ ಖಾಲಿ ಮಾಡಲಾಗಿದೆ ಮತ್ತು ಇನ್ನುಳಿದಂತೆ 0.45 ಮಿಲಿಯನ್ ಟನ್ ಗಳನ್ನು ವರ್ಷದ ಅಂತ್ಯದ ವೇಳೆಗೆ ಮಾರಾಟ ಮಾಡಲಾಗುತ್ತದೆ.
ISPRL ಮಂಗಳೂರಿನಲ್ಲಿ ಸಂಗ್ರಹವಾದ 0.75 ಮಿಲಿಯನ್ ಟನ್ ಸಾಮರ್ಥ್ಯದ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರ್ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಗೆ ಗುತ್ತಿಗೆ ನೀಡಿದೆ.

“MRPL ಸರ್ಕಾರವು ಮಂಗಳೂರಿನಲ್ಲಿ ಸಂಗ್ರಹಿಸಿದ ಕಚ್ಚಾ ತೈಲವನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿದೆ. ಮಂಗಳೂರಿನ ಮಾರುಕಟ್ಟೆ ಎಸ್.ಪಿ.ಆರ್ ನಲ್ಲಿ ಸೌದಿ ಕಚ್ಚಾ ತೈಲವನ್ನು ಸಂಗ್ರಹಿಸಲು MRPL ಬಯಸುತ್ತದೆ ಎಂದು ಅವರು ತಿಳಿಸಿದರು.

Join Whatsapp