ಮುಂಬೈ: ಜೈಲಿನಲ್ಲಿ ಪುತ್ರನನ್ನು ಭೇಟಿಯಾದ ಬಾಲಿವುಡ್ ನಟ ಶಾರುಕ್ ಖಾನ್

Prasthutha|

ಮುಂಬೈ: ಡ್ರಗ್ ಸೇವನೆ ಆರೋಪದಲ್ಲಿ ಮುಂಬೈನ ಎನ್.ಸಿ.ಬಿ ಯಿಂದ ಬಂಧಿತನಾದ ಆರ್ಯನ್ ಖಾನ್ ನನ್ನು ಇಂದು ಆತನ ತಂದೆ, ಖ್ಯಾತ ಬಾಲಿವುಡ್ ನಟ ಶಾರುಕ್ ಖಾನ್ ಆರ್ಥರ್ ಸೆಂಟ್ರಲ್ ಜೈಲಿನಲ್ಲಿ ಭೇಟಿಯಾದರು.

- Advertisement -

ಮುಂಬೈನ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿಯಲ್ಲಿ ವೇಳೆ ದಾಳಿ ನಡೆಸಿದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್.ಸಿ.ಬಿ)ನಿಂದ ಡ್ರಗ್ಸ್ ಸೇವನೆಯ ಆರೋಪದಲ್ಲಿ ಬಂಧಿಸಲ್ಪಟ್ಟ ನಂತರ ಇದೇ ಮೊದಲ ಬಾರಿಗೆ ಪುತ್ರ ಆರ್ಯನ್ ಖಾನ್ ನನ್ನು ಶಾರುಕ್ ಖಾನ್ ಭೇಟಿ ನಡೆಸಿ ಮಾತುಕತೆ ನಡೆಸಿದರು.

ಸಾಂಕ್ರಾಮಿಕ ರೋಗದ ಮಧ್ಯೆ ಮಹಾರಾಷ್ಟ್ರ ಸರ್ಕಾರವು ಜೈಲು ಭೇಟಿಗಳ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದ ನಂತರ ಶಾರುಕ್ ಅವರ ಈ ಭೇಟಿಗೆ ಅವಕಾಶ ನೀಡಿದೆ. ಈ ವೇಳೆ ಅವರು ದೂರವಾಣಿ ಮೂಲಕ ಪುತ್ರ ಆರ್ಯನ್ ಜೊತೆ ಮಾತುಕತೆ ನಡೆಸಿದರು. ಈ ಮಧ್ಯೆ ಆರ್ಯನ್ ಖಾನ್ ಜೊತೆ ಶಾರುಕ್ ಖಾನ್ ಮತ್ತು ತಾಯಿ ಗೌರಿ ವೀಡಿಯೋ ಕರೆಯ ಮೂಲಕ ಮಾತುಕತೆ ನಡೆಸಿದ್ದರು.

- Advertisement -

ಈಗಾಗಲೇ ಮುಂಬೈ ನ್ಯಾಯಾಲಯಕ್ಕೆ ಎರಡು ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೂ ಆರ್ಯನ್ ಹಾಗೂ ಆತನ ಜೊತೆಗಿದ್ದ ಇತರೆ ಆರೋಪಿಗಳ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು.



Join Whatsapp