ಬೆಂಗಳೂರು: ಪ್ರವಾದಿ ಜನ್ಮದಿನದ ಪ್ರಯುಕ್ತ ಇಂದು ಈದ್ ಮಿಲಾದ್ ಆಚರಣೆಯನ್ನು ನಾಡಿನೆಲ್ಲೆಡೆ ಸರಳವಾಗಿ ಆಚರಿಸಲಾಯಿತು.
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಮುಸ್ಲಿಮ್ ಬಾಂಧವರು ಸರಳವಾಗಿಯೇ ಈದ್ ಮಿಲಾದ್ ಕಾರ್ಯಕ್ರಮವನ್ನು ಮಸೀದಿಯಲ್ಲಿ ಆಚರಿಸಿದರು.
ವ್ಯಾಪಕವಾದ ಕೋವಿಡ್ ನ ಹಿನ್ನೆಲೆಯಲ್ಲಿ ಸರ್ಕಾರ ಈ ಸಲ ಸಾರ್ವಜನಿಕ ಮೆರವಣಿಗೆಯನ್ನು ನಿರ್ಬಂಧಿಸಿದ ಕಾರಣ ಮಸೀದಿಯಲ್ಲೇ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈದ್ ಮಿಲಾದ್ ಆಚರಿಸುತ್ತಿರುವ ಮುಸ್ಲಿಮ್ ಬಾಂಧವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವಾರು ಗಣ್ಯರು ಶುಭಾಶಯ ಕೋರಿದ್ದಾರೆ.