ಕರುಣಾನಿಧಿ ಬಗ್ಗೆ ಅಸಭ್ಯ ಟ್ವೀಟ್| ತಮಿಳುನಾಡು ಬಿಜೆಪಿ ರಾಜ್ಯ ನಾಯಕನ ಬಂಧನ

Prasthutha|

ಚೆನ್ನೈ: ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಬಗ್ಗೆ ಅಸಭ್ಯವಾಗಿ ಟ್ವೀಟ್ ಮಾಡಿದ್ದ ಬಿಜೆಪಿ ನಾಯಕನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

- Advertisement -


ಬಂಧಿತನನ್ನು ತಮಿಳುನಾಡು ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಆರ್.ಕೆ. ಕಲ್ಯಾಣರಾಮನ್ ಎಂದು ಗುರುತಿಸಲಾಗಿದೆ.
ಅಸಭ್ಯ ಟ್ವೀಟ್‌ ಹಿನ್ನೆಲೆಯಲ್ಲಿ ಕಲ್ಯಾಣರಾಮನ್ ವಿರುದ್ಧ ಹಲವು ದೂರುಗಳನ್ನು ಸ್ವೀಕರಿಸಲಾಗಿದೆ. ಟ್ವೀಟ್‌ಗಳನ್ನು ಪರಿಶೀಲಿಸಿದ ನಂತರ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ನಾಯಕ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಮತ್ತು ನಟಿ ಡಾ.ಶರ್ಮಿಳಾ ಬಗ್ಗೆ ಟ್ವೀಟ್ ಮಾಡಿದ್ದ ಎಂದು ವರದಿಯಾಗಿದೆ.

ಡಿಎಂಕೆ ಧರ್ಮಪುರಿ ಸಂಸದ ಸೆಂಥಿಲ್ ಕುಮಾರ್ ಮತ್ತು ವಿಡುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಪಕ್ಷದ ನಾಯಕ ಗೋಪಿನಾಥ್ ಅವರು ಈ ಕುರಿತು ದೂರು ಸಲ್ಲಿಸಿದ್ದರು.

- Advertisement -

ಆರೋಪಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಳೆದ ಫೆಬ್ರವರಿಯಲ್ಲಿ ಬಿಜೆಪಿ ಚುನಾವಣಾ ರ್ಯಾ ಲಿಯಲ್ಲಿ ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದ ಕಲ್ಯಾಣರಾಮನ್ ಬಂಧಿತನಾಗಿದ್ದ.



Join Whatsapp