ಕೊಲೆ ಪ್ರಕರಣ: ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ

Prasthutha|

ಚಂಡೀಗಡ: ಎರಡು ದಶಕಗಳ ಹಿಂದೆ ಮ್ಯಾನೇಜರ್ ಆಗಿದ್ದ ರಣ್ ಜೀತ್ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಸೇರಿದಂತೆ ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.

- Advertisement -

ಕೃಷ್ಣ ಲಾಲ್, ಜಸ್ಬೀರ್ ಸಿಂಗ್, ಅವತಾರ್ ಸಿಂಗ್ ಮತ್ತು ಸಬ್ದಿಲ್ ಎಂಬವರೇ ಜೀವಾವಧಿ ಶಿಕ್ಷೆಗೊಳಗಾದವರು.

ಮಾತ್ರವಲ್ಲ ರಾಮ್ ರಹೀಮ್ 31 ಲಕ್ಷ, ಅಬ್ದಿಲ್ 1.5 ಲಕ್ಷ, ಜಸ್ಬೀರ್ ಮತ್ತು ಕೃಷ್ಣನ್ 1.25 ಲಕ್ಷ ಮತ್ತು ಅವತಾರ್ ಗೆ 75 ಸಾವಿರ ದಂಡ ವಿಧಿಸಿದೆ. ಇದರಲ್ಲಿ ಶೇಕಡಾ 50 ರಷ್ಟು ಮೊತ್ತ ರಣ್ ಜಿತ್ ಸಿಂಗ್ ಕುಟುಂಬಕ್ಕೆ ಸಂದಾಯವಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.

- Advertisement -

ಪ್ರಕರಣದ ಆರನೇ ಆರೋಪಿ ವರ್ಷದ ಹಿಂದೆ ಮೃತಪಟ್ಟಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣ ಸಿಬಿಐ ವಿಶೇಷ ನ್ಯಾಯಾಲಯ ಐವರು ಆರೋಪಿಗಳು ತಪ್ಪಿತಸ್ಥರೆಂದು ಈ ತಿಂಗಳ ಆರಂಭದಲ್ಲಿ ಘೋಷಿಸಿತ್ತು.

2017 ರಲ್ಲಿ ಇಬ್ಬರು ಅನುಯಾಯಿಗಳ ಅತ್ಯಾಚಾರ ಆರೋಪದ ನಂತರ ರೋಹ್ಟಕ್ ಎಂಬಲ್ಲಿನ ಸುನಾರಿಯಾ ಜೈಲಿನಲ್ಲಿದ್ದ ರಾಮ್ ರಹೀಮ್ ಅವರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಶಿಕ್ಷೆಯನ್ನು ಪ್ರಕಟಿಸಲಾಯಿತು. ಈ ವೇಳೆ ಇತರ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು.

ಈ ಮಧ್ಯೆ ಸಂಭವನೀಯ ಹಿಂಸಾಚಾರದ ಸಾಧ್ಯತೆಯಲ್ಲಿ ಪೊಲೀಸರು ಪಂಚಕುಲ ಮತ್ತು ಸಿರ್ಸಾದಲ್ಲಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ.



Join Whatsapp