ಕುದ್ರೋಳಿ ವಾರ್ಡ್ ನಲ್ಲಿ ಎಸ್ ಡಿ ಪಿ ಐ ನೂತನ ಕಚೇರಿ ಉದ್ಘಾಟನೆ

Prasthutha|

ಮಂಗಳೂರು : ಕುದ್ರೋಳಿ ವಾಡ್೯ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐ ನೂತನ ಕಚೇರಿಯನ್ನು ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಉದ್ಘಾಟಿಸಿದರು.
ಎಸ್ ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ಮಾತನಾಡಿ, ದೇಶವನ್ನು ಆಳುವವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸುತ್ತಾ ದೇಶವನ್ನು ಆಳುವವರು ನಾವಾಗಬೇಕೆಂದು ಕರೆ ನೀಡಿದರು.

- Advertisement -


SDPI ಕುದ್ರೋಳಿ ವಾಡ್೯ ಅಧ್ಯಕ್ಷ ಮುಝೈರ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಎಸ್ ಡಿಪಿಐ ಮುಖಂಡರಾದ ವಿಕ್ಟರ್ ಮಾರ್ಟಿಸ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜಲೀಲ್ ಕೃಷ್ಣಾಪುರ, ಮಹಾನಗರ ಪಾಲಿಕೆಯ ಸದಸ್ಯರಾದ ಮುನೀಬ್ ಬೆಂಗ್ರೆ ,ಶಂಶಾದ್ ಅಬೂಬಕ್ಕರ್, ಸುಹೈಲ್ ಖಾನ್ ಉಪಸ್ಥಿತರಿದ್ದರು.ಅಕ್ಬರ್ ರಾಝ್ ಸ್ವಾಗತಿಸಿ ಅರ್ಶಾದ್ ಕುದ್ರೋಳಿ ವಂದಿಸಿದರು. ಸುರಯ್ಯ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.



Join Whatsapp