ಪುಣೆ: ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ್ದ 14 ವರ್ಷದ ಕಬಡ್ಡಿ ಆಟಗಾರ್ತಿಯನ್ನು ಬರ್ಬರ ಹತ್ಯೆಗೈದ ಘಟನೆ ಪುಣೆಯ ಬಿಬ್ವೇವಾಡಿಯಲ್ಲಿ ನಡೆದಿದೆ. ಭಗ್ನ ಪ್ರೇಮಿ ಯುವಕ ಮತ್ತು ಆತನ ಸಹಚರರು ಸೇರಿ ಎಂಟನೇ ತರಗತಿಯ ಬಾಲಕಿಯನ್ನು ಕಬಡ್ಡಿ ತರಬೇತಿಗೆ ಹೋಗುತ್ತಿದ್ದ ಮೈದಾನದ ಬಳಿ ನಡು ರಸ್ತೆಯಲ್ಲಿ ತಡೆದು ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ.
ಮೋಟಾರ್ ಸೈಕಲ್ ನಲ್ಲಿ ಸ್ಥಳಕ್ಕೆ ಬಂದ ದುಷ್ಕರ್ಮಿಗಳು ಬಾಲಕಿಯೊಂದಿಗೆ ವಾಗ್ವಾದಕ್ಕಿಳಿದಿದ್ದು, ತಕ್ಷಣವೇ ಚಾಕುವಿನಿಂದ ಹಲವು ಬಾರಿ ಇರಿದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಎಂಟನೇ ತರಗತಿಯ ಬಾಲಕಿಗೆ ಪ್ರಮುಖ ಆರೋಪಿ ಶುಭಂ ಭಾಗವತ್ ಪ್ರೀತಿಯ ಪ್ರಸ್ತಾಪ ಮಾಡಿದ್ದ. ಆದರೆ ಬಾಲಕಿ ಇದನ್ನು ತಿರಸ್ಕರಿಸಿದ್ದಳು.