ಖಾಲಿ ಹುದ್ದೆ ಭರ್ತಿ ಮಾಡಿದರೆ ರಾಜ್ಯದ ಬೊಕ್ಕಸವೇ ಖಾಲಿ: ಆರ್ ಆಶೋಕ್

Prasthutha|

ಕೆಲವು ಇಲಾಖೆಗಳನ್ನು ವಿಲೀನ ಮಾಡಲು ನಿರ್ಧಾರ

- Advertisement -

ಮಂಡ್ಯ: ಖಾಲಿ ಹುದ್ದೆಗಳೆಲ್ಲವನ್ನೂ ಭರ್ತಿ ಮಾಡಿದರೆ ರಾಜ್ಯದ ಇಡೀ ಬೊಕ್ಕಸದ ಹಣವೆಲ್ಲಾ ಸಿಬ್ಬಂದಿಯ ಸಂಬಳಕ್ಕೆ ಮೀಸಲಿಡಬೇಕಾಗುತ್ತದೆ ಎಂದು ಕಂದಾಯ ಸಚಿವ ಆರ್ ಆಶೋಕ್ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಗಮನದಲ್ಲಿಟ್ಟುಕೊಂಡು ಕೆಲವು ಇಲಾಖೆಗಳನ್ನು ರದ್ದು ಮಾಡಲು ನಿರ್ಧರಿಸಲಾಗಿದೆ. ಕೆಲ ಇಲಾಖೆಗಳು ನಿಷ್ಪ್ರಯೋಜಕವಾಗಿದ್ದು ಅಲ್ಲಿಯ ಸಿಬ್ಬಂದಿ ಕೆಲಸವಿಲ್ಲದೇ ಸುಮ್ಮನೆ ಬಂದು ಹೋಗುತ್ತಿದ್ದಾರೆ. ಅಂತಹ ಇಲಾಖೆಗಳನ್ನು ವಿಲೀನ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ಸಮಿತಿ ರಚನೆ ಮಾಡಿದ್ದಾರೆ. ನಾನೇ ಸಮಿತಿಯ ಮುಖ್ಯಸ್ಥನಾಗಿದ್ದು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.



Join Whatsapp