ಟೋಪಿ, ಪೈಜಾಮ ಧರಿಸಿದ ಮದರಸ ವಿದ್ಯಾರ್ಥಿಗಳಿಗೆ ಮಾರಣಾಂತಿಕವಾಗಿ ಹಲ್ಲೆಗೈದ ಹಿಂದುತ್ವವಾದಿ ಕಾರ್ಯಕರ್ತರು

Prasthutha|

ಗುಜರಾತ್ : ತಲೆಗೆ ಟೋಪಿ ಮತ್ತು ಪೈಜಾಮ ಧರಿಸಿದ ಕಾರಣಕ್ಕಾಗಿ ಇಬ್ಬರು ಮದರಸ ವಿದ್ಯಾರ್ಥಿಗಳಿಗೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಪಾಲ್ಡಿ ಪ್ರದೇಶದಲ್ಲಿ ನಡೆದಿದೆ.

- Advertisement -

ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ಉಮರ್ ಮತ್ತು ಕಿಝಾರ್ ಎಂದು ಗುರುತಿಸಲಾಗಿದ್ದು, ಹಿಂದುತ್ವವಾದಿಗಳ ಹಲ್ಲೆಗೆ ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮದರಸ ವಿದ್ಯಾರ್ಥಿಗಳು ಟೋಪಿ, ಪೈಜಾಪ ಹಾಕಿದ್ದೇ ಗೂಂಡಾಗಳು ಹಲ್ಲೆ ನಡೆಸಲು ನಿಖರ ಕಾರಣ ಎನ್ನಲಾಗಿದೆ.

ವಿದ್ಯಾರ್ಥಿಯೋರ್ವನ ಕೈಯನ್ನು ತಿರುಚಿ, ತಲೆ ಭಾಗಕ್ಕೆ ಗಂಭೀರವಾಗಿ ಹಲ್ಲೆ ನಡೆಸಲಾಗಿದ್ದು, ತೀವ್ರ ಗಾಯಗಲಾಗಿವೆ ಎಂದು ತಿಳಿದು ಬಂದಿದೆ. ಇಬ್ಬರು ವಿದ್ಯಾರ್ಥಿಗಳು ಜತೆ ಸೇರಿ ಸ್ಕೂಟರ್ ನಲ್ಲಿ ತಮ್ಮ ಮನೆಗೆ ತೆರಳುವ ವೇಳೆ ಹಲ್ಲೆ ನಡೆಸಲಾಗಿದೆ.



Join Whatsapp