ಭಾರತದ ಹಳ್ಳಿಗಳಲ್ಲಿ ನಾಲ್ವರಲ್ಲಿ ಮೂವರಿಗೆ ಪೌಷ್ಠಿಕಾಂಶದ ಕೊರತೆ | ಹಸಿವು ಸೂಚ್ಯಂಕದಲ್ಲಿ ಪಾಕ್, ಬಾಂಗ್ಲಾಕ್ಕಿಂತಲೂ ಕಳಪೆ ಸಾಧನೆ

Prasthutha|

ನವದೆಹಲಿ : ಭಾರತದ ಗ್ರಾಮೀಣ ಪ್ರದೇಶದ ನಾಲ್ವರಲ್ಲಿ ಮೂವರಿಗೆ ಪೌಷ್ಠಿಕಾಂಶ ಭರಿತ ಆಹಾರ ಸಿಗುವುದಿಲ್ಲ ಎಂದು ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ ಪ್ರಕಟಿಸಿರುವ ವರದಿಯೊಂದರಲ್ಲಿ ತಿಳಿಸಲಾಗಿದೆ. ಈ ಕುರಿತು ‘ದ ವೈರ್’ ಸೇರಿದಂತೆ ವಿವಿಧ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ

- Advertisement -

2020ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 107 ರಾಷ್ಟ್ರಗಳಲ್ಲಿ ಭಾರತ 94ನೇ ಸ್ಥಾನದಲ್ಲಿರುವ ಕಳವಳಕಾರಿ ಹಸಿವು ಸೂಚ್ಯಂಕ ಬಿಡುಗಡೆಯಾಗಿರುವ ಬೆನ್ನಲ್ಲೇ ಈ ವರದಿ ಪ್ರಕಟವಾಗಿದೆ. ಪೌಷ್ಠಿಕಾಂಶ ಭರಿತ ಆಹಾರ ಪೂರೈಸುವ ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

2011ರ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಅಂಶಗಳನ್ನಾಧರಿಸಿ ಭಾರತದ ಗ್ರಾಮೀಣ ಪ್ರದೇಶದಲ್ಲಿನ ಪೌಷ್ಠಿಕಾಂಶ ಕೊರತೆಯ ಕುರಿತ ವರದಿ ಸಿದ್ಧಪಡಿಸಲಾಗಿದೆ. 2015-16ರ ಅಂಕಿ ಅಂಶಗಳ ಪ್ರಕಾರ, ಶೇ.38ರಷ್ಟು ಚಿಕ್ಕಮಕ್ಕಳ ಬೆಳವಣಿಗೆ ಕುಂಠಿತಗೊಂಡಿದೆ. ಕಳೆದ ವರ್ಷ ಜಾಗತಿಕ ಹಸಿವು ಸೂಚ್ಯಂಕದಲ್ಲಿ 117 ರಾಷ್ಟ್ರಗಳ ಪೈಕಿ 102ನೇ ಸ್ಥಾನದಲ್ಲಿತ್ತು. ನೆರೆಯ ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಪಾಕಿಸ್ತಾನ ಕೂಡ ಹಸಿವು ಸೂಚ್ಯಂಕದಲ್ಲಿ ಗಂಭೀರ ವಿಭಾಗದಲ್ಲಿವೆ, ಆದರೆ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ. ಬಾಂಗ್ಲಾದೇಶ್ ಈ ಸೂಚ್ಯಂಕದಲ್ಲಿ 75, ಮ್ಯಾನ್ಮಾರ್ 78, ಪಾಕಿಸ್ತಾನ 88ನೇ ಸ್ಥಾನದಲ್ಲಿದೆ. ನೇಪಾಳ 73 ಮತ್ತು ಶ್ರೀಲಂಕಾ 64ನೇ ಸ್ಥಾನದಲ್ಲಿವೆ.



Join Whatsapp