ಮುಂದುವರಿದ ಹೆಸರು ಬದಲಾವಣೆ ಚಾಳಿ| ಜಿಮ್ ಕಾರ್ಬೆಟ್ ಉದ್ಯಾನವನದ ಮರುನಾಮಕರಣ ಮಾಡಿದ ಬಿಜೆಪಿ ಸರ್ಕಾರ!

Prasthutha|

ಡೆಹ್ರಾಡೂನ್: ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವನ್ನು ರಾಮ್ ಗಂಗಾ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡಲಾಗಿದೆ ಹುಲಿ ರಕ್ಷಿತಾರಣ್ಯದ ನಿರ್ದೇಶಕರು ಘೋಷಿಸಿದ್ದಾರೆ.

- Advertisement -

“ಅಕ್ಟೋಬರ್ 3 ರಂದು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಅಶ್ವನಿ ಕುಮಾರ್ ಚೌಬೆ, ಉದ್ಯಾನವನ್ನು ರಾಮ್ ಗಂಗಾ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡಲಾಗುವುದು ಎಂದು ತಿಳಿಸಿರುವುದಾಗಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕರು ಹೇಳಿದ್ದಾರೆ” ಎಂದು ANI ವರದಿ ಮಾಡಿದೆ.

ಪ್ರಸ್ತಾವನೆಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರವೇ ಅಂತಿಮ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದ್ದರು. ಅನೇಕ ವನ್ಯಜೀವಿಗಳನ್ನು ಕೊಂದು ಅಂತಿಮವಾಗಿ ವನ್ಯಜೀವಿ ಸಂರಕ್ಷಣಾ ಪ್ರಚಾರಕನಾದ ವಿಶ್ವಪ್ರಸಿದ್ಧ ಬೇಟೆಗಾರನಾಗಿದ್ದಾನೆ ಎಡ್ವರ್ಡ್ ಜಿಮ್ ಕಾರ್ಬೆಟ್.

- Advertisement -

1936 ರಲ್ಲಿ ಕುಮಾವುನ್ ಬೆಟ್ಟದಲ್ಲಿ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನವಾದ ಹೇಯಿಲಿ ರಾಷ್ಟ್ರೀಯ ಉದ್ಯಾನವನವನ್ನು ನಿರ್ಮಿಸಲು ಜಿಮ್ ಕಾರ್ಬೆಟ್ ಕಾರಣರಾಗಿದ್ದರು. 1957 ರಲ್ಲಿ ಅವರ ನೆನಪಿಗಾಗಿ ಉದ್ಯಾನವನವನ್ನು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡಲಾಯಿತು.

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು 520 ಚದರ ಕಿಲೋಮೀಟರ್ ಪ್ರದೇಶವನ್ನು ವ್ಯಾಪಿಸಿದೆ. ಹುಲಿಗಳಿಗೆ ಸೂಕ್ತ ಸ್ಥಳವಾದ ಇದು ಬೆಟ್ಟಗಳು, ಜೌಗು ಪ್ರದೇಶಗಳು, ನದಿ ತೀರದ ಪ್ರದೇಶಗಳು, ಹುಲ್ಲುಗಾವಲುಗಳು ಮತ್ತು ದೊಡ್ಡ ಸರೋವರವನ್ನು ಒಳಗೊಂಡಿದೆ.



Join Whatsapp